ಉಪ್ಪಿನಂಗಡಿ, ಡಿ.06 (DaijiworldNews/PY): ಎರಡು ಕೋಮಿನ ಗುಂಪಿನ ಮಧ್ಯೆ ಗಲಾಟೆ ನಡೆದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ.
ಈ ಘಟನೆ ಉಪ್ಪಿನಂಗಡಿಯ ಅಂಡೆತ್ತಡ್ಕದಲ್ಲಿ ನಡೆದಿದ್ದು, ಗಲಾಟೆಯ ಪರಿಣಾಮ ಮೂವರು ಯುವಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಧಾವಿಸಿದ ಉಪ್ಪಿನಂಗಡಿ ಠಾಣೆ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.