ಉಡುಪಿ, ಡಿ.05 (DaijiworldNews/SM): ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಪರ್ಯಾಯ ಮಂಗಳೋತ್ಸವದ 'ವಿಶ್ವಾರ್ಪಣಮ್' ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ನಡೆಯಿತು.
ಪರ್ಯಾಯ ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಮಾತನಾಡಿ, ಪ್ರಾಣಿ, ಪಕ್ಷಿಗಳಿಂದ ಹೋಲಿಸಲ್ಪಡುವ ಮನುಷ್ಯ ತನ್ನ ಬುದ್ಧಿ, ಹೃದಯದಿಂದ ತನ್ನಿಂದ ಇತರರು ಉಪಕರಿಸಲ್ಪಡಬೇಕು ಎಂದು ಯೋಚಿಸಿ ಪಂಚಭೂತಗಳಂತೆ ವರ್ತಿಸಿದಾಗ ಪ್ರಪಂಚ ಉದ್ಧಾರವಾಗುತ್ತದೆ ಎಂದು ಆಶೀರ್ವಚನ ನೀಡಿದರು. ಅಧ್ಯಕ್ಷರಾಗಿ ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ನನ್ನ ಗುರುಗಳು ವಯಸ್ಸು,ಅವಕಾಶ ಇದ್ದರೂ ತಾನು ಬೆನ್ನಿಗೆ ನಿಂತು ತನ್ನ ಶಿಷ್ಯನಿಂದ ಪರ್ಯಾಯ ಮಾಡಿಸಿ ಲೋಕಕ್ಕೆ ಉತ್ತಮ ಸಂದೇಶ ನೀಡಿ ಅದರಂತೆ ಗೃಹಸ್ಥರೂ ಪ್ರಾಯ ಪ್ರಭುದ್ಧರಾದ ಮಕ್ಕಳಿಂದ ಮನೆಯ ಜವಾಬ್ದಾರಿಯನ್ನು ನೀಡಬೇಕು ಎಂದು ನುಡಿದರು.
ಚಿತ್ರಾಪುರ ಮಠಾಧೀಶರಾದ ಶ್ರೀವಿದ್ಯೇಂದ್ರತೀರ್ಥ ಶ್ರೀಪಾದರು,ವಿಶ್ವ ಅಂದರೆ ಭಗವಂತ,ಅದರಂತೆ ಭಗವಂತನ ಪರ್ಯಾಯ ಪೂಜೆ ಮುಖ್ಯಪ್ರಾಣ ಮೂಲಕ ಶ್ರೀಕೃಷ್ಣನಿಗೆ ಉತ್ತಮ ಕಾರ್ಯಕ್ರಮಗಳ ಮೂಲಕ ಅರ್ಪಿಸುವ 'ವಿಶ್ವಾರ್ಪಣಂ' ನಲ್ಲಿ ಭಾಗವಹಿಸಿದ್ದು ಸಂತೋಷವಾಗಿದೆ,ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹರಸಿದರು.