ಮಂಗಳೂರು, ನ 26(SM): ಮೊಬೈಲ್ ಮಳಿಗೆಯ ಪ್ರೊಮೋಷನ್ ಗಾಗಿ ಪೂರ್ವಿಕಾ ಮೊಬೈಲ್ ಮಳಿಗೆ ಕ್ರೈಸ್ತ ದೇವರ ಫೋಟೋಗಳನ್ನು ಬಳಸಿ ಎಡವಟ್ಟು ಮಾಡಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.
ಮಂಗಳೂರಿನ ಮಿಲಾಗ್ರಿಸ್ ಚರ್ಚ್ ನಲ್ಲಿ ನಿನ್ನೆ ಬೆಳಗ್ಗೆ ಪ್ರಾರ್ಥನೆ ಮುಗಿಸಿ ಕ್ರೈಸ್ತ ಬಾಂಧವರು ಹೊರ ಬರುತ್ತಿದ್ದಂತಹ ಸಂದರ್ಭದಲ್ಲಿ ಯೇಸು ಕ್ರಿಸ್ತ ಹಾಗೂ ಹೋಲಿ ಫ್ಯಾಮಿಲಿ ಫೋಟೋಗಳಲ್ಲಿ ಪೂರ್ವಿಕಾ ಕಂಪೆನಿ ತನ್ನ ಜಾಹೀರಾತನ್ನು ಬಳಸಿ ಕರಪತ್ರಗಳನ್ನು ತಯಾರಿಸಿ ವಿತರಿಸಲಾಗಿದೆ. ಪೂರ್ವಿಕಾ ಮಳಿಗೆಯ ಈ ಕ್ರಮಕ್ಕೆ ಕ್ರೈಸ್ತ ಬಾಂಧವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯೇಸು ಕ್ರಿಸ್ತರ ಫೋಟೋಗಳನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ಕೆಲವರು ಸ್ಥಳದಲ್ಲೇ ಕರಪತ್ರ ವಿತರಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ದೇವರು, ಧರ್ಮದ ವಿಚಾರವನ್ನು ಫೋಟೋಗಳನ್ನು ಬಳಸಿಕೊಂಡು ವ್ಯವಹಾರ ನಡೆಸುವುದು ಸರಿಯಲ್ಲ. ಇಂತಹ ಸಂಸ್ಥೆಗಳನ್ನು ಭಕ್ತರು ಪ್ರೋತ್ಸಾಹಿಸಬಾರದು ಎಂದು ಧರ್ಮಪಾಲಕರು ಆಗ್ರಹಿಸಿದ್ದಾರೆ.