ವಿಟ್ಲ, ನ 26(SM): ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಸೂರಜ್ ಬಂಗೇರ ವಿಟ್ಲ ಎಂಬ ಹೆಸರಿನ ಪೇಜ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಹಿಂದೂ ದೇವತೆಗಳಿಗೆ ಅವಮಾನಿಸುವಂತಹ ಪೋಸ್ಟ್ ಗಳು ಪ್ರಕಟಗೊಂಡಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಲಾಗಿದೆ.
ಹಿಂದು ದೇವತೆಗಳಿಗೆ ಅವಮಾನ ಮಾಡುವುದರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರಗಳನ್ನು ಎಡಿಟ್ ಮಾಡಿ ನಗ್ನವಾಗಿ ಈ ಪೇಜ್ ನಲ್ಲಿ ಪೊಸ್ಟ್ ಮಾಡಲಾಗುತ್ತಿಯೆಂದು ವಿಎಚ್.ಪಿ ದೂರಿನಲ್ಲಿ ತಿಳಿಸಿದೆ. ಈ ಬಗ್ಗೆ ವಿಟ್ಲ ಪೊಲೀಸರು ದೂರು ಸ್ವೀಕರಿಸಿ ತನಿಖೆ ಮುಂದುವರಿಸಿದ್ದಾರೆ.
ಇನ್ನು ಇಂತಹ ಅಸಭ್ಯ ವರ್ತನೆ ತೋರುವವರು ಯಾರೇ ಆದರೂ ಅಂತವರಿಗೆ ಕಾನೂನು ರೀತಿಯ ದಂಡನೆಯಾಗಬೇಕು. ಇದಕ್ಕೆ ಪೂರಕವಾಗಿ ಈ ಕೃತ್ಯದ ವಿರುದ್ಧ ಕಾನೂನು ರೀತಿಯ ಪ್ರಕರಣ ದಾಖಲಿಸಲಾಗಿದೆ. ಒಂದೊಮ್ಮೆ ನ್ಯಾಯ ಒದಗಿಸಲು ಕಾನೂನು ವಿಫಲಗೊಂಡಲ್ಲಿ ನಕಲಿ ಹೆಸರಿನಲ್ಲಿ ಅಸಭ್ಯವಾಗಿ ವರ್ತಿಸುತ್ತಿರುವ ವ್ಯಕ್ತಿ ಬಜರಂಗದಳ ಕಾರ್ಯಕರ್ತರ ಕೈಗೆ ಸಿಕ್ಕಿದರೆ ಅವನಿಗೆ ಸರಿಯಾಗಿಯೇ ಪಾಠ ಕಲಿಸುವುದಾಗಿ ಸಂಘಟನೆಯ ಮುಖಂಡರು ಎಚ್ಚರಿಸಿದ್ದಾರೆ.