ಮಂಗಳೂರು, ನ 25(SM): ನಗರದ ನೆಹರು ಮೈದಾನದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ದ.ಕ. ಜಿಲ್ಲೆ ವತಿಯಿಂದ ಬೃಹತ್ ಜನಾಗ್ರಹ ಸಭೆ ನಡೆಯಿತು. ಜನಾಗೃಹ ಸಭೆಗೆ ಬಿಜೆಪಿ ಬೆಂಬಲ ನೀಡಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜನಾಗ್ರಹ ಸಭೆಯಲ್ಲಿ ಭಾಗವಹಿಸಿದ ಹಿಂದೂ ಮುಖಂಡರಿಗೆ ಹಾಗೂ ಬಿಜೆಪಿಯ ನಾಯಕರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಜನಸಾಮಾನ್ಯರ ಜತೆಗೆ ನೆಲದಲ್ಲೇ ಕುಳಿತು ಎಲ್ಲರ ಗಮನ ಸೆಳೆದರು. ಶಾಸಕರಿಗೆ ಸಂಸದರಿಗೆ ಹಾಗೂ ಇನ್ನಿತರ ಮುಖಂಡರಿಗೆ ವಿಐಪಿ ಸೀಟ್ ಗಳನ್ನು ಸಿದ್ಧಪಡಿಸಲಾಗಿತ್ತು. ಆದರೆ, ಆಯೋಧ್ಯೆ ವಿಚಾರ ಬಂದಾಗ ಹಾಗೂ ನಮ್ಮ ದೇಶದ ವಿಚಾರಗಳು ಬಂದಾಗ ಜನಸಾಮಾನ್ಯರೊಂದಿಗೆ ಬೆರೆತು ಕಾರ್ಯ ಮಾಡುವ ಇಂಗಿತವನ್ನು ಅವರು ಇಂದು ಎಲ್ಲರಿಗೂ ತೋರ್ಪಡಿಸಿದ್ದಾರೆ.