ವಾಶಿಂಗ್ಟನ್ ಅ16: ಬೆಂಗಳೂರಿನಲ್ಲಿ ಹತ್ಯೆಯಾದ ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹತ್ಯೆ ಘಟನೆಯು ಅಮೆರಿಕನ್ ಪಾರ್ಲಿಮೆಂಟಿನಲ್ಲಿ ಚರ್ಚೆಗೊಳಗಾಗಿದೆ. ಅಭಿಪ್ರಾಯ ಸ್ವಾತಂತ್ರ್ಯದ ಹೆಸರಲ್ಲಿ ಜಗತ್ತಿನ ನಾನಾ ಭಾಗಗಳಲ್ಲಿ ನಡೆಯುತ್ತಿರುವ ಆಕ್ರಮಣ ಹಾಗೂ ಹತ್ಯೆಗಳ ಕುರಿತು ಸದನದಲ್ಲಿ ಚರ್ಚೆಯಾಗುತ್ತಿರುವ ಸಂಧರ್ಭದಲ್ಲಿ ಗೌರಿ ಲಂಕೇಶ್,ಗೋವಿಂದ್ ಪನ್ಸಾರೆ,ಎಂ.ಎಂ ಕಲ್ಬುರ್ಗಿ, ಮೊದಲಾದವರ ಹತ್ಯೆಗಳು ಹಾಗೂ ಕಾಂಜಾ ಏಲೈಯ್ಯರ ಮೇಲೆ ನಡೆದ ಆಕ್ರಮಣ ಚರ್ಚೆಗೆ ಬಂದಿದೆ.
ರಿಪಬ್ಲಿಕನ್ ಪಕ್ಷದ ಸದಸ್ಯರಾದ ಹೆರಾಲ್ಡ್ ಟ್ರೆಂಡ್ಸ್ ಫ್ರಾಂಕ್ಸ್ ತಮ್ಮ ಭಾಶಣದಲ್ಲಿ ಗೌರಿ ವಿಶಯವನ್ನು ಪ್ರಸ್ತಾಪಿಸಿ ಜಗತ್ತಿನಲ್ಲಿ ಅಭಿಪ್ರಾಯ ಸ್ವಾತಂತ್ರ್ಯಕ್ಕೆ ನಿರಂತರ ಧಕ್ಕೆಯುಂಟಾಗುತ್ತಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಲೂ ಸಹ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದು ಕೆಲವೊಮ್ಮೆ ಆಕ್ರಮಣ ಹಾಗೂ ಹತ್ಯೆಗಳ ಹಂತಕ್ಕೂ ತಲುಪುತ್ತಿದೆ ಎಂದು ಅವರು ಹೇಳಿದರು.
ಅಧಿಕಾರದಲ್ಲಿರುವ ಪಕ್ಷದ ಪ್ರಜಾಪ್ರಭುತ್ವ ವಿರೋಧಿ ಕೆಲಸಗಳನ್ನು ಧೈರ್ಯವಾಗಿ ವಿಮರ್ಶಿಸಿದ ಕಾರಣಕ್ಕಾಗಿ ಗೌರಿ ಲಂಕೇಶರ ಹತ್ಯೆಯಾಯಿತು. ಗೋವಿಂದ ಪನ್ಸಾರೆ,ಎಂ.ಎಂ ಕಲ್ಬುರ್ಗಿ, ನರೇಂದ್ರ ದಾಬೋಲ್ಕರ್ ಮೊದಲಾದ ಸಾಮಾಜಿಕ ಕಾಳಜಿಯಿರುವ ಚಿಂತಕರು ಇದೇ ರೀತಿಯನ್ನು ಹತ್ಯೆಗೈಯಪಟ್ಟರು ಎಂದ ಅವರು ಮುಂದೆ ತಮ್ಮ ಭಾಷಣದಲ್ಲಿ ಕಾಂಜಾ ಏಲೈಯ್ಯರ ಬಗ್ಗೆಯೂ ಪ್ರಸ್ತಾಪಿಸಿದರು.