ಮಂಗಳೂರು, ನ 25(SM): ಅಂಬರೀಶ್ ನಿಧನ ಹಿನ್ನೆಲೆ ರಾಜ್ಯದಲ್ಲಿ ಶೋಕಾಚರಣೆಯ ಕಾರಣ ಕಡಬ, ಮೂಡುಬಿದಿರೆ ತಾಲೂಕು ಉದ್ಘಾಟನೆಯನ್ನು ಮುಂದೂಡಲಾಗಿದೆ ಎಂದು ಕಂದಾಯ ಸಚಿವ ಆರ್. ವಿ. ದೇಶಪಾಂಡೆ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಎರಡು ತಾಲೂಕು ಕೇಂದ್ರಗಳಿಗೆ ಉದ್ಘಾಟನೆಗೆ ದಿನ ಕೂಡಿ ಬರುತ್ತಿಲ್ಲ. ಮುಂದೆ ಸರಿಯಾದ ದಿನವನ್ನು ನೋಡಿ ತಾಲೂಕುಗಳನ್ನು ಉದ್ಘಾಟಿಸಲಿದ್ದೇವೆ ಎಂದರು.
ಇನ್ನು ಗೋವಾ ಸರ್ಕಾರದಿಂದ ಕರ್ನಾಟಕ ರಾಜ್ಯದ ಮೀನುಗಳಿಗೆ ನಿರ್ಬಂಧ ವಿಚಾರವಾಗಿ ಪ್ರತಿಕ್ರಿಯಿಸಿರುವ ಆರ್.ಬಿ ದೇಶಪಾಂಡೆ, ಈ ಬಗ್ಗೆ ಗೋವಾ ಸರ್ಕಾರದೊಂದಿಗೆ ಡಿಸಿ, ಆರೋಗ್ಯ ಸಚಿವರೊಂದಿಗೆ ಮಾತುಕತೆ ಮಾಡಲಾಗಿದೆ. ಇದರ ಅನ್ವಯ ಗೋವಾ ಸರಕಾರ ಕರ್ನಾಟಕದ ಮೀನಿನ ಮೇಲೆ ನಿರ್ಬಂಧ ಹೇರಿಲ್ಲ ಎಂದು ಆರೋಗ್ಯ ಸಚಿವರ ಹೇಳಿದ್ದಾರೆ ಎಂದರು.
ಗೋವಾ ಸರ್ಕಾರ ಇಲ್ಲಿ ಮೀನನ್ನು ಪಡೆಯಲು ಆಹಾರ ಇಲಾಖೆಯಿಂದ ಸರ್ಟಿಫಿಕೇಟ್ ಪಡೆಯಲು ತಿಳಿಸಿದೆ. ಇದಕ್ಕೆ ಮಂಗಳೂರಿನ ಮೀನುಗಾರರು ತಮ್ಮ ಅನುಮತಿಯನ್ನು ಸೂಚಿಸಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಗುಣಮಟ್ಟದ ಮೀನು ರಫ್ತು ಮಾಡುವುದು ಉತ್ತಮ. ಆಹಾರ ಇಲಾಖೆಯಿಂದ ಈ ಸರ್ಟಿಫಿಕೇಟ್ ಮೀನುಗಾರು ಪಡೆಯಲಿದ್ದಾರೆ ಎಂದಿದ್ದಾರೆ.