ಕಾಸರಗೋಡು, ನ 29 (DaijiworldNews/MS): ತುಳು ಕನ್ನಡ ರಂಗಭೂಮಿಯ ಹಿರಿಯ ರಂಗಕಲಾವಿದ , ಶ್ರೀ ನಂದಿಕೇಶ್ವರ ನಾಟಕ ಸಂಘದ ರೂವಾರಿ ದಿ. ಪಿ.ಬಿ ರೈ ಯವರ ಧರ್ಮ ಪತ್ನಿ, ನಾಟಕ ಕಲಾವಿದೆ ಶ್ರೀಮತಿ ಬೇಬಿ ಯಾನೆ ಸುಮಿತ್ರ ರೈ (76 ) ನ.29 ರ ಭಾನುವಾರ ಮಂಜೇಶ್ವರ ಸಮೀಪದ ಕುಂಜತ್ತೂರಿನ ತಮ್ಮ ಸ್ವ ಗೃಹದಲ್ಲಿ ನಿಧನ ಹೊಂದಿದರು.
ಅವರು ಪುತ್ರ ಕಿರುತೆರೆ ಮತ್ತು ರಂಗಭೂಮಿ ನಟ ರಾಘವೇಂದ್ರ ರೈ ಮತ್ತು ಪುತ್ರಿ ಸಿನಿಮಾ ರಂಗಭೂಮಿ ಕಿರುತೆರೆ ನಟಿ ಶೋಭಾ ರೈ ಯವರನ್ನು ಅಗಲಿದ್ದಾರೆ.
ದಿವಂಗತರು ಖ್ಯಾತ ಗುಬ್ಬಿ ವೀರಣ್ಣ ನಾಟಕ ಕಂಪನಿ, ಬಸವರಾಜ ಬಡಿಗೇರ ಮತ್ತು ತಮ್ಮ ಪತಿಯವರು ಕಟ್ಟಿ ಬೆಳೆಸಿದ ಶ್ರೀ ನಂದಿಕೇಶ್ವರ ನಾಟಕ ಸಂಘದಲ್ಲಿ ರಂಗನಟಿಯಾಗಿ, ಹಾಗೂ ಹಲವಾರು ಚಲನಚಿತ್ರಗಳಲ್ಲಿ ಸುಮಾರು ಐವತ್ತು ವರುಷಗಳ ಕಾಲ ನಟಿಸಿದ್ದಾರೆ.
ಇಂದು ಬೆಳಿಗ್ಗೆ ಹತ್ತು ಘಂಟೆಗೆ ಕುಂಜತ್ತೂರಿನ ಸ್ವಗೃಹದಲ್ಲಿ ಅಂತಿಮ ವಿಧಿ ವಿಧಾನಗಳು ನಡೆಯಲಿದೆ.ಅಗಲಿದ ದಿವ್ಯಾತ್ಮಕ್ಕೆ, ತುಳು ನಾಟಕ ಕಲಾವಿದರ ಒಕ್ಕೂಟ ರಿ. ಮಂಗಳೂರು ತೀವ್ರ ಸಂತಾಪ ಸೂಚಿಸಿದೆ