ಉಡುಪಿ, ನ. 28 (DaijiworldNews/SM): ಬೈಕ್ ಮತ್ತು ಕಾರಿನ ನಡುವೆ ಅಪಘಾತವುಂಟಾಗಿ ಬಳಿಕ ಇತ್ತಂಡಗಳ ನಡುವೆ ಮಾತಿನ ಚಕಮಕಿ ನಡೆದ ಘಟನೆ ಇಲ್ಲಿನ ಪರ್ಕಳ ನಡು ಪೇಟೆಯಲ್ಲಿ ನಡೆದಿದೆ.
ಘಟನೆಯಿಂದಾಗಿ ಸುಮಾರು ಅರ್ಧ ತಾಸು ಟ್ರಾಫಿಕ್ ಜಾಂ ಉಂಟಾಗಿತು. ಈ ವೇಳೆ ಜಗಳ ಬಿಡಿಸಲು ಹೋದ ನಗರಸಭಾ ಸದಸ್ಯರ ಮೇಲೆ ಹಲ್ಲೆಗೆ ಯತ್ನ ನಡೆದಿದೆ. ಉಡುಪಿ ನಗರಸಭಾ ಸದಸ್ಯ ಯೋಗೀಶ್ ಸಾಲಿಯಾನ್ ಮೇಲೆ ಹಲ್ಲೆ ಯತ್ನ ನಡೆದಿದೆ.
ಮಣಿಪಾಲ ಎಂಐಟಿ ಬಸ್ ಸ್ಟಾಪ್ ಬಳಿ ಬರುವಾಗ ನಗರಸಭಾ ಸದಸ್ಯನ ಬೈಕ್ ಅಡ್ಡ ಹಾಕಲು ತಂಡ ಯತ್ನಿಸಿದೆ. ತಕ್ಷಣವೇ ಮಣಿಪಾಲ ಪೋಲಿಸ್ ಠಾಣೆ ಮತ್ತು ಹಿಂದೂಪರ ಸಂಘಟನೆಗಳಿಗೆ ಯೋಗೀಶ್ ಸಾಲಿಯಾನ್ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಮಣಿಪಾಲ ಪೋಲಿಸರು ಎರಡೂ ತಂಡಗಳಿಗೂ ಠಾಣೆಗೆ ಆಗಮಿಸುವಂತೆ ಸೂಚನೆ ನೀಡಿದ್ದಾರೆ. ಬಳಿಕ ಠಾಣೆಯಲ್ಲಿ ರಾಜಿ ಪಂಚಾಯಿತಿಗೆ ನಡೆಸಿದ್ದಾರೆ.