ಕಾಸರಗೋಡು, ನ. 28 (DaijiworldNews/SM): ಜಿಲ್ಲೆಯಲ್ಲಿ ರವಿವಾರ 79 ಮಂದಿಗೆ ಕೊರೋನಾ ಪಾಸಿಟಿವ್ ದೃಢ ಪಟ್ಟಿದೆ. ರವಿವಾರದಂದು 68 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
ಪ್ರಸ್ತುತ ಜಿಲ್ಲೆಯಲ್ಲಿ 785 ಮಂದಿ ಚಿಕಿತ್ಸೆಯಲ್ಲಿದ್ದಾರೆ. 3,920 ಮಂದಿ ನಿಗಾದಲ್ಲಿದ್ದಾರೆ. ಇದುವರೆಗೆ 141,685 ಮಂದಿಗೆ ಸೋಂಕು ದೃಢ ಪಟ್ಟಿದ್ದು, 139,639 ಮಂದಿ ಗುಣಮುಖ ರಾಗಿದ್ದಾರೆ. 711 ಮಂದಿ ಮೃತಪಟ್ಟಿದ್ದಾರೆ.