ಹೊಸದಿಲ್ಲಿ, ನ24(SS): ಕಚ್ಚಾ ತೈಲದ ದರ ಇಳಿಕೆಯಾಗುತ್ತಿದ್ದು, ಪೆಟ್ರೋಲ್ ದರದಲ್ಲಿ ಶುಕ್ರವಾರ ಲೀಟರ್ಗೆ 40 ಪೈಸೆಯಷ್ಟು ಇಳಿಕೆಯಾಗಿದೆ.
ಇಂಧನ ದರ ಇಳಿಯುತ್ತಿರುವುದು, ಡಾಲರ್ ಎದುರು ರೂಪಾಯಿ ಮೌಲ್ಯ ಬಲಗೊಳ್ಳುತ್ತಿರುವುದು ದೇಶದ ಆರ್ಥಿಕತೆ ಮೇಲೆ ಸಕಾರಾತ್ಮಕ ಪ್ರಭಾವ ಬೀರಿವೆ. ಮೂರು ತಿಂಗಳ ಬಳಿಕ ಡಾಲರ್ ಎದುರು ರೂಪಾಯಿ ದರ ಗುರುವಾರ 71ಕ್ಕಿಂತ ಕೆಳಕ್ಕೆ ಇಳಿದಿತ್ತು.
ಗುರುವಾರ ಲೀಟರ್ಗೆ 42 ಪೈಸೆ ಕುಸಿದಿತ್ತು. ನಿನ್ನೆ ಬೆಂಗಳೂರಿನಲ್ಲಿ ಪೆಟ್ರೋಲ್ ದರ ರೂ.76.17ಕ್ಕೆ ಇಳಿದಿದೆ. ನವೆಂಬರ್ ಆರಂಭದಿಂದ ಇಂದಿನವರೆಗೆ ಪೆಟ್ರೋಲ್ ದರದಲ್ಲಿ 4 ರೂ., ಡೀಸೆಲ್ ದರದಲ್ಲಿ ಒಟ್ಟು ರೂ. 3.10 ಇಳಿಕೆಯಾಗಿದೆ. ಡೀಸೆಲ್ ದರದಲ್ಲಿ ಗುರುವಾರ 30 ಪೈಸೆ ಇಳಿಕೆಯಾಗಿದ್ದರೆ, ಶುಕ್ರವಾರ ಲೀಟರ್ಗೆ 42 ಪೈಸೆ ಕಡಿಮೆಯಾಗಿದ್ದು ಬೆಂಗಳೂರಿನಲ್ಲಿ 70.93 ರೂ.ಗೆ ಕುಸಿದಿದೆ.