ಬೆಂಗಳೂರು, ನ 23(SM): 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಗದಿದ್ದರೂ ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ನೆಲಮಂಗಲ ತಾಲೂಕಿನ ಅರ್ಜುನಬೆಟ್ಟಳ್ಳಿಯ ಶ್ರೀನಿವಾಸ ಸ್ವಾಮೀಜಿ ಭವಿಷ್ಯ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಶುಕ್ರವಾರ ಅರ್ಜುನಬೆಟ್ಟಳ್ಳಿಯ ಶ್ರೀ ಪರಿಪೂರ್ಣ ಸನಾತನ ಆಶ್ರಮಕ್ಕೆ ಭೇಟಿ ನೀಡಿದರು. ಈ ವೇಳೆ ಶ್ರೀನಿವಾಸ ಸ್ವಾಮೀಜಿ ಬಳಿ ಮುಂದಿನ ರಾಜಕೀಯದ ಕುರಿತು ಭವಿಷ್ಯ ಕೇಳಿದ್ದಾರೆ.
ದೇಶದ ಜನರು ಬಿಜೆಪಿಗೆ ಮುಂದೆಯೂ 5 ವರ್ಷ ಕಾಲ ಅಧಿಕಾರ ನೀಡಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನಾವು ಕೂಡ ಜನಪರ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇವೆ. ನೀವು ಮತ್ತೇ ಮುಖ್ಯಮಂತ್ರಿ ಆಗಲಿದ್ದೀರಿ ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ.