ಮಂಗಳೂರು, ನ. 24 (DaijiworldNews/SM): 64ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಗೆ ರೈಫಲ್ ಕ್ಲಬ್ ನ ಎಂಟು ಮಂದಿ ಶೂಟರ್ ಗಳು ಆಯ್ಕೆಯಾಗಿದ್ದಾರೆ. ಈ ಕುರಿತಂತೆ ಮುಖ್ಯ ಕೋಚ್ ಮುಖೇಶ್ ಕುಮಾರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2021ರಲ್ಲಿ ಸ್ಮಾಲ್ ಬೋರ್ ರೈಫಲ್ ಈವೆಂಟ್ಗಳನ್ನು ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾವು ಎಂಪಿ ಸ್ಟೇಟ್ ಶೂಟಿಂಗ್ ಅಕಾಡೆಮಿ ಶೂಟಿಂಗ್ ರೇಂಜ್ ಗಳು, ಗೋರೆಗಾಂವ್ ಭೋಪಾಲ್ ಗಳಲ್ಲಿ ನವೆಂಬರ್ 25 ರಿಂದ ಡಿಸೆಂಬರ್ 10ರ ವರೆಗೆ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಡಾ. ಕರ್ನಿ ಸಿಂಗ್ ಶೂಟಿಂಗ್ ಅಕಾಡೆಮಿ ನವದೆಹಲಿಯಲ್ಲಿ ಡಿಸೆಂಬರ್ 6ರ ವರೆಗೆ ನಡೆಯಲಿದೆ. ಇಬ್ಬರು ಪಿಸ್ತೂಲ್ ಶೂಟರ್ ಮತ್ತು ಆರು ಮಂದಿ ರೈಫಲ್ ಶೂಟರ್ಗಳು ಸ್ಪರ್ಧಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಝಹೀರ್, ಸಂದೇಶ್ ಮೊದಲಾದವರು ಉಪಸ್ಥಿತರಿದ್ದರು.