ಕಾಸರಗೋಡು, ನ.23 (DaijiworldNews/HR): ಜಿಲ್ಲೆಯಲ್ಲಿ ಕೋವಿಡ್ ವ್ಯಾಕ್ಸಿನೇಷನ್ನ ಎರಡನೇ ಡೋಸ್ ಪಡೆಯಲು ಜನರು ಹಿಂಜರಿಯುತ್ತಿದ್ದು, ಇದರಿಂದ ಸೋಂಕು ನಿಯಂತ್ರಣ ಸವಾಲಾಗಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಶೇಕಡಾ 98.07 ಮಂದಿ ಮೊದಲ ಡೋಸ್ ಪಡೆದಿದ್ದಾರೆ. ಆದರೆ ಎರಡನೇ ಡೋಸ್ ಪಡೆದವರು 59. 56 ಶೇಕಡಾ ಮಾತ್ರ. ಇದು ಆತಂಕಕ್ಕೆ ಕಾರಣವಾಗುತ್ತಿದೆ.
ಇನ್ನು ಎರಡನೇ ಡೋಸ್ ಪಡೆಯುವ ಕಾಲಾವಧಿ ತಲಪಿದ 55, 500 ಮಂದಿ ಇನ್ನೂ ವ್ಯಾಕ್ಸಿನ್ ಪಡೆದಿಲ್ಲ. ಎರಡನೇ ಡೋಸ್ ಪಡೆದಲ್ಲಿ ಮಾತ್ರ ದೇಹದಲ್ಲಿ ರೋಗ ಪ್ರತಿರೋಧ ಶಕ್ತಿ ಹೆಚ್ಚಾಗಲು ಕಾರಣ ವಾಗಲಿದೆ. ಇದರಿಂದ ರೋಗ ಪ್ರತಿರೋಧ ಶಕ್ತಿ ಹೆಚ್ಚಾಗುವ ನಿಟ್ಟಿನಲ್ಲಿ ಎರಡನೇ ಡೋಸ್ ಪಡೆಯುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.