ಮಧ್ಯಪ್ರದೇಶ,ನ 23(MSP): ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಾಣ ಮಾಡುವ ವಿಚಾರದಲ್ಲಿ ಕಾಂಗ್ರೆಸ್ ಎಂದು ವಿರೋಧವನ್ನು ತೋರ್ಪಡಿಸಿಲ್ಲ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ರಾಜ್ ಬಬ್ಬರ್ ಹೇಳಿದ್ದಾರೆ. ನ.28ರಂದು ನಡೆಯಲಿರುವ ಮಧ್ಯಪ್ರದೇಶ ಚುನಾವಣಾ ಪ್ರಚಾರ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ರಾಮಮಂದಿರ ನಿರ್ಮಾಣ ವಿಚಾರ ಚುನಾವಣೆಯ ಪ್ರಮುಖ ಅಸ್ತ್ರವಾಗಿದೆ. ಆದರೆ ರಾಮ ಮಂದಿರ ವಿಚಾರವನ್ನು ಕಾಂಗ್ರೆಸ್ ಎಂದು ವಿರೋಧಿಸಿಲ್ಲ. ಹಾಗೆಂದು ಬಿಜಿಪಿ ಕೂಡಾ ರಾಮನ ಕುರಿತು ವಿಶೇಷ ಕಾಳಜಿ ಹೊಂದಿಲ್ಲ. ಚುನಾವಣೆ ಬಂದಾಗ ಬಿಜೆಪಿ ಪಕ್ಷಕ್ಕೆ ರಾಮನ ನೆನಪಾಗುತ್ತದೆ ಎಂದು ವ್ಯಂಗ್ಯವಾಡಿದರು.
ರಾಮ ಮಂದಿರ ನಿರ್ಮಾಣ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಸುಪ್ರೀಂ ಕೋರ್ಟ್ ನ್ಯಾಯ ತೀರ್ಮಾನ ಮಾಡುತ್ತದೆ. ಆದರೆ ರಾಮ ಮಂದಿರ ವಿಷಯದಲ್ಲಿ ಬಿಜೆಪಿಯೂ ಮತದಾರರನ್ನು ವಂಚಿಸುತ್ತಾ ಜನರನ್ನು ಮೂರ್ಖರನ್ನಾಗಿಸುತ್ತದೆ. ಭಾರತೀಯ ಜನತಾ ಪಕ್ಷ ದೇವಾಲಯ ನಿರ್ಮಾಣದ ಭರವಸೆ ನೀಡಿದ್ದಾರಾದರೂ ಯಾಕೆ ಈವರೆಗೆ ದಿನಾಂಕವನ್ನು ಹೇಳಿಲ್ಲ? ಎಂದು ಪ್ರಶ್ನಿಸಿದರು.
ಮಂದಿರ ನಿರ್ಮಾಣವನ್ನು ಕಾಂಗ್ರೆಸ್ಪಕ್ಷ ಯಾವತ್ತೂ ವಿರೋಧಿಸಲಿಲ್ಲ ಮತ್ತು ಮುಂದೆ ಭವಿಷ್ಯದಲಲ್ಲಿಯೂ ಹಾಗೆ ಮಾಡುವುದಿಲ್ಲ ದೇಶದ ಎಲ್ಲ ಜನರೂ ರಾಮ ಮಂದಿರದ ನಿರ್ಮಾಣವನ್ನು ಬಯಸುತ್ತಾರೆ. ಮಂದಿರವನ್ನು ನಿರ್ಮಿಸಬೇಕೆಂದು ಮುಸ್ಲಿಮರು ಬಯಸುತ್ತಿದ್ದಾರೆಂದು ನಾನು ಭಾವಿಸುತ್ತೇನೆ. ಆದರೆ, ಸುಪ್ರೀಂಕೋರ್ಟ್ನಲ್ಲಿ ಈ ಪ್ರಕರಣ ಇನ್ನೂ ಬಾಕಿ ಇರುವುದರಿಂದ ಕೋರ್ಟ್ ಈ ಸಮಸ್ಯೆಯನ್ನು ನಿರ್ಧರಿಸುತ್ತದೆ’ ಎಂದರು.