ಉಡುಪಿ: ಬಾಲಕಿಗೆ ಬೆದರಿಕೆಯೊಡ್ಡಿ ನಿರಂತರ ಅತ್ಯಾಚಾರ-ಇಬ್ಬರು ಆರೋಪಿಗಳ ಬಂಧನ
Sun, Nov 21 2021 10:35:33 PM
ಉಡುಪಿ, ನ. 21 (DaijiworldNews/SM): ಅಪ್ರಾಪ್ತೆಯ ಮೇಲೆ ಇಬ್ಬರು ಯುವಕರು ನಿರಂತರವಾಗಿ ಎರಡು ತಿಂಗಳು ಅತ್ಯಾಚಾರಗೈದ ಘಟನೆ ಉಡುಪಿಯ ಹಿರಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿಗಳಾದ ಸಂದೀಪ್ ನಾಯ್ಕ ಹಾಗೂ ವಿಘ್ನೇಶ್ ನಾಯ್ಕರನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯ ತಂದೆ ಹಾಗು ತಾಯಿ ಕೆಲಸಕ್ಕೆ ಎಂದು ಮನೆಯಿಂದ ಹೊರ ಹೋದವರು ರಾತ್ರಿ ಮನೆಗೆ ಮರಳುತ್ತಿದ್ದರು. ಈ ವೇಳೆ ಮನೆಯಲ್ಲಿ ಒಬ್ಬಳೇ ಇರುತ್ತಿದ್ದ ಬಾಲಕಿಯನ್ನು ಆಕೆಯ ತಂದೆಯ ಸಂಬಂಧಿಕ ಇಬ್ಬರು ಯುವಕರು ತಂದೆ ತಾಯಿಯನ್ನು ಕೊಲ್ಲುವುದಾಗಿ ಬಾಲಕಿಯನ್ನು ಬೆದರಿಸಿ ನಿರಂತರ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತೆ ಬಾಲಕಿಯ ತಾಯಿ ದೂರಿನಲ್ಲಿ ವಿವರಿಸಿದ್ದಾರೆ.
ಈ ಬಗ್ಗೆ ಉಡುಪಿ ಮಹಿಳಾ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.