ಕಾಸರಗೋಡು, ನ.21 (DaijiworldNews/HR): ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ಭಾರೀ ಪ್ರಮಾಣದ ಸ್ಪಿರಿಟ್ ಮತ್ತು ಮದ್ಯವನ್ನು ಕಾಸರಗೋಡು ಅಬಕಾರಿ ದಳದ ಸಿಬಂದಿಗಳು ವಶಪಡಿಸಿಕೊಂಡಿದ್ದು, ಓರ್ವನನ್ನು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಬಂಧಿತನನ್ನು ಮಲಪ್ಪುರಂನ ಸಿ.ವಿ ಸೈನುದ್ದಿನ್ (35) ಎಂದು ಗುರುತಿಸಲಾಗಿದೆ.
ಅಬಕಾರಿ ದಳಕ್ಕೆ ಲಭಿಸಿದ ಮಾಹಿತಿಯಂತೆ ಭಾನುವಾರ ಬೆಳಿಗ್ಗೆ ಬೇಕಲ ಸಮೀಪದ ಪಳ್ಳಿಕೆರೆಯಿಂದ ಅಕ್ರಮ ಸಾಗಾಟ ಪತ್ತೆ ಹಚ್ಚಲಾಗಿದ್ದು, ಟೋರಸ್ ಲಾರಿಯಲ್ಲಿ ಸಾಗಾಟ ಮಾಡಲಾಗುತಿತ್ತು. ಲಾರಿಯಿಂದ 1890 ಲೀಟರ್ ಸ್ಪಿರಿಟ್ ಹಾಗೂ1323 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನು ಗೋವಾ ದಿಂದ ಮಲಪ್ಪುರಂಗೆ ಸಾಗಾಟ ಮಾಡುತ್ತಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ.