ಬೆಂಗಳೂರು, ನ 22(SM): ಇನ್ನು ಮುಂದೆ ನಾನು ಮಾಧ್ಯಮದವರೊಂದಿಗೆ ಹೆಚ್ಚು ಮಾತನಾಡಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ. ನಾನು ಮಾಧ್ಯಮದವರ ಸಲಹಾ ಸಮಿತಿಯನ್ನು ರಚನೆ ಮಾಡಿ ಏನು ಮಾತಾನಾಡಬೇಕು. ಏನು ಮಾತಾನಾಡಬಾರದು ಅಂತಾ ಕೇಳುತ್ತೇನೆ ಎಂದಿದ್ದಾರೆ.
ರಾಜ್ಯದ ಬೀದಿ ಬದಿ ರೈತರನ್ನು ಸಾಲಶೂಲ, ಮೀಟರ್ ಬಡ್ಡಿ ಮಾಫಿಯಾದಿಂದ ರಕ್ಷಿಸೋ ಸಲುವಾಗಿ ಬಜೆಟ್ನಲ್ಲಿ ಘೋಷಿಸಿದ್ದ ಬಡವರ ಬಂಧು ಯೋಜನೆಗೆ ಚಾಲನೆ ನೀಡಿ ಮುಖ್ಯಮಂತ್ರಿಗಳು ಮಾತನಾಡಿದರು.
ಕಳೆದ ಕೆಲವು ದಿನಗಳ ಬೆಳವಣಿಗೆಗಳಿಂದ ನನಗೆ ಬಹಳ ನೋವಾಗಿದೆ. ನನಗೆ ಹೇಗೆ ಮಾತನಾಡಬೇಕು ಎಂದು ಸಲಹೆ ಪಡೆಯುವ ಪರಿಸ್ಥಿತಿ ಇದೆ. ನನ್ನ ಮಾತಿಗೆ ಬೇರೆ ಅರ್ಥ ಕಲ್ಪಿಸಲಾಗುತ್ತದೆ. ಈ ಕಾರಣಕ್ಕಾಗಿಯೇ ಇನ್ಮುಂದೆ ನಾನು ಜಾಸ್ತಿ ಮಾತನಾಡಲ್ಲ. ಅದರಲ್ಲೂ ಮಾಧ್ಯಮಕ್ಕೆ ಹೇಳಿಕೆ ಕೊಡಲ್ಲ ಎಂದಿದ್ದಾರೆ.