ಉಡುಪಿ, ನ 22(SM): ನಗರಸಭೆಯ ಸಭಾಂಗಣದಲ್ಲಿ ಶಾಸಕ ರಘುಪತಿ ಭಟ್ ಇವರ ಅಧ್ಯಕ್ಷತೆಯಲ್ಲಿ ನಗರಸಭಾ ಚುನಾಯಿತ ಪ್ರತಿನಿಧಿಗಳ ಮತ್ತು ಅಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ ಒಟ್ಟು 34 ಜನರಿಗೆ ವಾಜಪೇಯಿ ವಸತಿ ಯೋಜನೆ ಹಾಗೂ ಡಾ.ಬಿ.ಆರ್.ಅಂಬೆಡ್ಕರ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ಮಂಜೂರಾತಿ ಪತ್ರ ವಿತರಿಸಲಾಯಿತು.
ಸಭೆಯಲ್ಲಿ ಮೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತಕರ ಗಣರಾಜ್ ಭಟ್ ಉಪಸ್ಥಿತಿಯಲ್ಲಿ ವಿದ್ಯುತ್ ದಾರಿ ದೀಪದ ಸಮಸ್ಯೆಯ ಬಗ್ಗೆ ಚರ್ಚಿಸಲಾಯಿತು. ಹಾಗೂ ಕುಡ್ ಸೆಂಪ್ ಅಧಿಕಾರಿಗಳು ಹಾಜರಿದ್ದು ವಾರಾಹಿ ಯೋಜನೆಯ ಬಗ್ಗೆ ಚರ್ಚಿಸಿದರು. ಹಾಗೂ ನಳ್ಳಿ ನೀರು, ಕಸ ವಿಲೇವಾರಿ, ಪ್ಯಾಚ್ ವರ್ಕ್ ಕಾಮಗಾರಿಗಳ ಬಗ್ಗೆ ಚರ್ಚಿಸಲಾಯಿತು. ಪರ್ಕಳದಿಂದ ಆದಿ ಉಡುಪಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಹಾಗೂ ಭೂಸ್ವಾಧೀನದ ಬಗ್ಗೆ ಚರ್ಚಿಸಲಾಯಿತು.
ಇನ್ನು ಶಾಸಕರ ಒತ್ತಾಯದ ಮೇರೆಗೆ ತಡವಾಗಿ ಸಭೆಗೆ ಆಗಮಿಸಿದ ಕಮಿಷನರ್ ಆನಂದ ಅವರನ್ನು ಶಾಸಕರು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು. ಮತ್ತೆ ನೂತನ ಸದಸ್ಯರು ಹಾಗೂ ಹೊಸ ಕಮಿಷನರ್ ಅವರನ್ನು ಪರಸ್ಪರ ಪರಿಚಯ ಮಾಡಿಸಿದರು.
ಕುಂಟುತ್ತಲೇ ಸಾಗಿದ ಸಭೆಯನ್ನು ಅರ್ಧದಲ್ಲೇ ಮೊಟಕುಗೊಳಿಸಲಾಯಿತು. ಸದಸ್ಯರು ಕೂಡ ನಿರಾಶೆಯಿಂದಲೇ ಸಮಸ್ಯೆಗೆ ಪರಿಹಾರ ಸಿಗದೇ, ಸಭೆಯಿಂದ ನಿರ್ಗಮಿಸಿದರು.