ಕಾಸರಗೋಡು,ನ 22(MSP): ಶಬರಿಮಲೆ ವಿವಾದಕ್ಕೆ ಸಂಬಂಧಪಟ್ಟಂತೆ ನಿಂದನಾತ್ಮಕ ಬರಹ ಪ್ರಕಟಿಸಿದ ಆರೋಪದಲ್ಲಿ ಕಾಞಂಗಾಡು ಸಮೀಪದ ದೇವಾಲಯವೊಂದರ ಮುಖ್ಯ ಅರ್ಚಕರೊಬ್ಬರ ವಿರುದ್ದ ಗುರುವಾರ ಅಮಾನತು ಆದೇಶ ಹೊರಡಿಸಲಾಗಿದೆ. ಶಬರಿಮಲೆಗೆ ಹೊರಟ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್ ಅವರನ್ನು ಪೊಲೀಸರು ಬಂಧಿಸಿದ ಘಟನೆಯನ್ನು ಖಂಡಿಸಿ ಮುಜರಾಯಿ ಸಚಿವ ಕಡಗಂಪಳ್ಳಿ ಸುರೇಂದ್ರನ್ ಅವರ ವಿರುದ್ದ ಫೇಸ್ಬುಕ್ನಲ್ಲಿ ನಿಂದನಾತ್ಮಕ ಬರಹ ಪ್ರಕಟಿಸಿದ್ದರು ಎನ್ನುವ ಆರೋಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಕಡಗಂಪಳ್ಳಿ ಸುರೇಂದ್ರನ್ ವಿರುದ್ಧ ಕಾಞಂಗಾಡು ಸಮೀಪದ ಮಡಿಯನ್ ಕೂಲೋಂ ಕ್ಷೇತ್ರಪಾಲಕ ದೇವಾಲಯದ ಮುಖ್ಯ ಅರ್ಚಕ ಟಿ. ಮಾಧವನ್ ನಂಬೂದಿರಿ ಪೇಸ್ಬುಕ್ ಪೋಸ್ಟ್ ಮೂಲಕ ನಿಂದಿಸಿದ್ದಾರೆ ಎಂದು ಅವರ ವಿರುದ್ದ ಈ ಕ್ರಮ ಕೈಗೊಳ್ಳಲಾಗಿದೆ.
ಇವರು ಕಾರ್ಯನಿರ್ವಹಿಸುವ ದೇವಸ್ಥಾನವು ಮಲಬಾರ್ ದೇವಸ್ವಂ ಮಂಡಳಿಯ ಅಧೀನದಲ್ಲಿದ್ದು, ಮಂಡಳಿಯ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.