ಉಡುಪಿ, ಅ 15: ಧರ್ಮ ಸಂಸತ್ ಪೂರ್ವಭಾವಿಯಾಗಿ ಭಾನುವಾರ ಆಯೋಜಿಸಿದ್ದ ಉಡುಪಿ ನಗರ ಕಾರ್ಯಕರ್ತರ ಸಮಾವೇಶವನ್ನು ವಿಶ್ವ ಹಿಂದು ಪರಿಷತ್ ಕ್ಷೇತ್ರಿಯ ಕಾರ್ಯದರ್ಶಿ ಜಿ. ಗೋಪಾಲ್ ಉದ್ಘಾಟಿಸಿದರು.
ಇಂದಿನ ರಾಜಕಾರಣಿಗಳು ಜಾತಿಯ ಹೆಸರಲ್ಲಿ ಸಮಾಜವನ್ನು ಒಡೆಯುತ್ತಿದ್ದಾರೆ. ಸಮುದಾಯದೊಳಗೆ ಇನ್ನೊಂದು ಸಮುದಾಯ ಹುಟ್ಟುಹಾಕಿ, ಆ ಸಂಘರ್ಷದ ಕಿಡಿಯಲ್ಲಿ ಅಧಿಕಾರವನ್ನು ಅನುಭವಿಸಬೇಕಂಬ ದುರಾಸೆಯ ರಾಜಕಾರಣವನ್ನು ಮಾಡುತ್ತಿದ್ದಾರೆ ಎಂದು ವಿಶ್ವ ಹಿಂದು ಪರಿಷತ್ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ ಜೀ ತಿಳಿಸಿದರು.
ನವೆಂಬರ್ 24– 26ರ ವರೆಗೆ ಉಡುಪಿಯಲ್ಲಿ ನಡೆಯುವ ಧರ್ಮ ಸಂಸತ್ ಪೂರ್ವಭಾವಿಯಾಗಿ ಸಭೆಯಾಗಿ ಭಾನುವಾರ ರಾಘವೇಂದ್ರ ಮಠದಲ್ಲಿ ಆಯೋಜಿಸಿದ್ದ ಉಡುಪಿ ಉಡುಪಿ ನಗರ ಕಾರ್ಯಕರ್ತರ ಸಮಾವೇಶವನವನ್ನು ಉದ್ಘಾಟಿಸಿ ಮಾತನಾಡಿದರು.
ರಾಜಕಾರಣ ಸಮಾಜವನ್ನು ಒಡೆಯುತ್ತದೆ. ಸಮಾಜವನ್ನು ಜೋಡಿಸುವ ಶಕ್ತಿ ಕೇವಲ ಧರ್ಮಕ್ಕೆ ಇದೆ. ವಿಶ್ವ ಹಿಂದು ಪರಿಷತ್ ಯಾವುದೇ ಒಂದು ಜಾತಿ, ವರ್ಗಕ್ಕೆ ಸೀಮಿತವಾಗಿಲ್ಲ. ಜಾತಿ ಭೇದ, ಭಿನ್ನತೆ, ಲಿಂಗ ತಾರತಮ್ಯವಿಲ್ಲದೆ ಎಲ್ಲರನ್ನು ಜೋಡಿಸುತ್ತಿದೆ. ಯುವಕ ಯುವತಿಯರನ್ನು, ಹಿರಿಯರನ್ನು, ತಾಯಂದಿರನ್ನು ಹಾಗೂ ಎಲ್ಲಾ ಜಾತಿ, ವರ್ಗಗಳನ್ನು ಪ್ರತಿನಿಧಿಸುವುದರ ಜೊತೆಗೆ ನೈಜ ಹಿಂದೂ ಸಮಾಜದ ನೇತೃತ್ವವನ್ನು ವಹಿಸಿದೆ ಎಂದು ಹೇಳಿದರು.
ಧರ್ಮ ಸಂಸದ್ ಸಾಕ್ಷಿಯಾಗಲಿದೆ ಉಡುಪಿ:
ಉಡುಪಿ ಶ್ರೀ ಕೃಷ್ಣ ಆಶೀರ್ವಾದದ ಬಲ, ಸಂತರ ತಪಾಶಕ್ತಿ, ವಿಶ್ವ ಹಿಂದು ಪರಿಷತ್ ಹಿರಿಯರ ಸಂಕ್ಪಲದ ಫಲವಾಗಿ ಕರ್ನಾಟಕ ಇತಿಹಾಸದಲ್ಲಿ ಪ್ರಥಮ ಬಾರಿಗೆ 1969ರಲ್ಲಿ ಶ್ರೀಕೃಷ್ಣ ಕ್ಷೇತ್ರದಲ್ಲಿ ಎಲ್ಲಾ ಮತ, ಪಂಥ, ಸಂಪ್ರದಾಯದ ಸ್ವಾಮೀಜಿಗಳು ಒಂದು ವೇದಿಕೆಯಲ್ಲಿ ಒಂದಾಗಿ ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆಗೆ, ಜಾತೀಯತೆಗೆ ಯಾವುದೇ ಅವಕಾಶವಿಲ್ಲ. ನಾವೆಲ್ಲರೂ ಸಹೋದರರು ಎಂದು ಸಂದೇಶ ಬೀರಿದ ಅದ್ಭುತ ಕಾರ್ಯಕ್ರಮಕ್ಕೆ ಇಂದಿಗೆ 48 ವರ್ಷಗಳು ತುಂಬುತ್ತಿದೆ. 1985ರ ಧರ್ಮ ಸಂಸತ್ ನಡೆದ ಬಳಿಕ ರಾಮಜನ್ಮ ರಾಮಜನ್ಮ ಭೂಮಿಯ ಆಂದೋಲನಕ್ಕೆ ನಾಂದಿ ಹಾಡಿದ್ದು, ಇದೇ ಉಡುಪಿಯಲ್ಲಿ ಎಂದು ತಿಳಿಸಿದರು.
ಆ ಕ್ಷಣ ಮತ್ತೆ ಉಡುಪಿಯ ಪಾಲಿಗೆ ಬಂದಿದ್ದೆ. ಜಿಲ್ಲೆಯ ಪ್ರತಿಯೊಂದು ಮನೆಗೂ ಸಂಸತ್ ಆಹ್ವಾನ ತಲುಪುವಂತಾಗಬೇಕು. ಮೂರು ದಿನ ಕಾಲ ನಡೆಯಲಿರುವ ಕಾರ್ಯಕ್ರಮಕ್ಕೆ ಸುಮಾರು 2 ಸಾವಿರ ಸಂತರು ಆಗಮಿಸಲಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ವಿವಿಧ ಸಮಾಜದ ಸುಮಾರು 3ಸಾವಿರ ಮಂದಿ ಪ್ರಮುಖರು ಸಮಾವೇಶದಲ್ಲಿ ಪಾಲ್ಗೋಳ್ಳುವ ಪ್ರತಿಯೊಬ್ಬರಿಗೂ ಉಡುಪಿಯ ವಿಶ್ವ ರೂಪ ದರ್ಶನ ಆಗಬೇಕು. ಹಿಂದೂ ಸಮಾಜದ ಏಕತೆ ಉದ್ಭವಿಸಿ ಒಡೆದ ಮನಸ್ಸುಗಳನ್ನು ಒಂದು ಮಾಡಲು ಹೊರಟಿವೆ. ಜಾತಿಯ ದುರಾಭಿಮಾನವನ್ನು ಪಕ್ಕಕ್ಕೆ ಸರಿಸಿ, ಹಿಂದುತ್ವದ ಸ್ವಾಭಿಮಾನಕ್ಕೆ ಹೃದಯದಲ್ಲಿ ಅಂಕಿತ ಹಾಕಬೇಕು. ಜಾತಿಯ ಸಂಕೋಲೆ ದೂರವಾಗಿ, ಹಿಂದುತ್ವದ ಭಾವನೆ ಬೆಳಗಬೇಕು. ಅಂತಹ ಕಾರ್ಯಕ್ಕೆ ಧರ್ಮ ಸಂಸತ್ ಮುನ್ನಡಿಯಾಗಬೇಕು.
ನಂತರ ಪ್ರಾಂತ ಕಾರ್ಯದರ್ಶಿ ಟಿ.ಎ.ಪಿ ಶೆಣೈ ಮಾತನಾಡಿ ಕೇವಲ ವಿದ್ಯೆ, ವಿದ್ವತ್ನಿಂದ ಹಿಂದೂ ಧರ್ಮದ ಸಂರಕ್ಷಣೆ ಸಾಧ್ಯವಿಲ್ಲ. ಶಕ್ತಿ ಸಾಮಥ್ಯದ ಅಗತ್ಯವೂ ಇದೆ. ನಮ್ಮ ಕಾರ್ಯಕರ್ತರಲ್ಲಿ ಉತ್ಸಾಹವಿರಬೇಕು. ಆದರೆ ಉದ್ರೇಕವಿರಬಾರದು ಎಂದರು.
ಸಮಾರಂಭದಲ್ಲಿ ವಿಶ್ವ ಹಿಂದು ಪರಿಷದ್ನ ಪ್ರಾಂತ ಕಾರ್ಯಧ್ಯಕ್ಷ ಎಂ. ಬಿ. ಪುರಾಣಿಕ್, ಜಿಲ್ಲಾಧ್ಯಕ್ಷ ವಿಲಾಸ್ ನಾಯಕ, ಪ್ರಾಂತ ಅಧ್ಯಕ್ಷರು ಡಾ.ವಿಜಯಲಕ್ಷ್ಮಿ ದೇಶಮಾನಿ, ಮಂಗಳೂರು ವಿಭಾಗದ ಬಜರಂಗದಳದ ಸಹ ಸಂಚಾಲಕ ಕೆ.ಆರ್. ಸುನೀಲ್, ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್, ಸಂಘಟನಾ ಕಾರ್ಯದರ್ಶಿ ಶರಣ ಪಂಪ್ವೆಲ್, ಧರ್ಮ ಪ್ರಸಾರ ಪ್ರಮುಖ್ ಕುಸುಮ ನಾರಾಯಣ ನಾಯಕ್, ಉಪಾಧ್ಯಕ್ಷೆ ಸುಪ್ರಭಾ ಆಚಾರ್ಯ, ಜಿಲ್ಲಾ ಕಾರ್ಯದರ್ಶಿ ರತ್ನಾಕರ ಅಮಿನ್ ಮತ್ತಿತರರು ಉಪಸ್ಥಿತರಿದ್ದರು.