ಕಾರ್ಕಳ, ನ. 16 (DaijiworldNews/SM): ಕುಕ್ಕುಂದೂರು ಗುಂಡ್ಯಡ್ಕ ನಿವಾಸಿ ಎಂಪಿಎಂ ಕಾಲೇಜು ರಸ್ತೆಯ ಗಾಯತ್ರಿ ಪ್ಯಾಕ್ಟರಿ ಸಮೀಪದ ನಿವಾಸಿ ರಮೇಶ(60) ನಾಪತ್ತೆಯಾಗಿದ್ದಾರೆ.
ನ.13ರಂದು ಕಾರ್ಕಳ ಬಸ್ ಸ್ಟಾಂಡ್ನ ಹತ್ತಿರದಿಂದ ಕಾಣೆಯಾಗಿದ್ದಾರೆ. ಇದುವರೆಗೆ ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುವ ಕುರಿತು ನಗರ ಠಾಣೆಗೆ ದೂರು ನೀಡಿದ್ದಾರೆ.
5 ಅಡಿ 3 ಇಂಚು ಎತ್ತರ, ಬಿಳಿ ಕೂದಲು, ಸಿಮೆಂಟ್ ಬಣ್ಣದ ಪ್ಯಾಂಟ್ ಮತ್ತು ನೀಲಿ ಹಳದಿ ಬಣ್ಣದ ಟಿ-ಶರ್ಟ್ ಧರಿಸುತ್ತಾರೆ. ಮಾಹಿತಿ ತಿಳಿದುಕೊಂಡಲ್ಲಿ ಕಾರ್ಕಳ ನಗರ ಠಾಣೆಗೆ ಮಾಹಿತಿ ನೀಡಿಬೇಕಾಗಿ ಪ್ರಕಟಣೆ ತಿಳಿಸಿದೆ.