ಮಧ್ಯಪ್ರದೇಶ,ನ 21(MSP):ಭಾರತ ಕಂಡ ಅತ್ಯಂತ ವರ್ಣರಂಜಿತ ರಾಜಕಾರಣಿಗಳಲ್ಲಿ ಒಬ್ಬರಾದ ವಿದೇಶಾಂಗ ಸಚಿವೆ, ಹಿರಿಯ ಬಿಜೆಪಿ ನಾಯಕಿ, ಸುಷ್ಮಾ ಸ್ವರಾಜ್ 2019 ರ ಲೋಕಸಭೆ ಚುನಾವಣೆಗೆ ತಾವು ಸ್ಪರ್ಧಿಸುವುದಿಲ್ಲ ಎಂದು ಚುನಾವಣಾ ನಿವೃತ್ತಿ ಘೋಷಿಸಿದ್ದು ಹಲವು ರೀತಿಯ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ಸುಷ್ಮಾ ಸ್ವರಾಜ್ ರಾಜಕೀಯ ನಿವೃತ್ತಿಯಾಗುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು.
ಆದರೆ ಇದೀಗ ಇವೆಲ್ಲದಕ್ಕೂ ಸ್ಪಷ್ಟನೆ ನೀಡಿರುವ ಸುಷ್ಮಾ ಸ್ವರಾಜ್ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಅಷ್ಟೇ, ಆದರೆ ರಾಜಕೀಯದಿಂದ ನಿವೃತ್ತಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಟ್ವೀಟ್ ಮಾಡಿರುವ ಅವರು " ನಾನು ರಾಜಕೀಯದಿಂದ ನಿವೃತ್ತಿಯಾಗುವುದಿಲ್ಲ, ಆರೋಗ್ಯ ಕಾರಣಗಳಿಗಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.
ರಾಜಕೀಯದಲ್ಲಿ 41 ವರ್ಷದ ಅನುಭವ ಇರುವ ಸುಷ್ಮಾ ಸ್ವರಾಜ್ ತಮ್ಮ 25 ನೇ ವಯಸ್ಸಿನಲ್ಲಿ ಅಂದರೆ 1977ರಲ್ಲಿ ರಾಜಕೀಯಕ್ಕೆ ದುಮುಕಿದ್ದರು. 4 ಬಾರಿ ಲೋಕಸಭೆ ,3 ಬಾರಿ ರಾಜ್ಯಸಭೆ ಹಾಗೂ 3 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಅಲ್ಲದೆ ನವ ದೆಹಲಿಯ ಮುಖ್ಯಮಂತ್ರಿಯೂ ಆಗಿದ್ದರು. 1999ರಲ್ಲಿ ಬಳ್ಳಾರಿಯಿಂದಲೂ ಸ್ಪರ್ಧಿಸಿದ್ದರು.