ಬಂಟ್ವಾಳ, ನ 16 (DaijiworldNews/MS): ಮಸೀದಿಗೆ ನುಗ್ಗಿ ಧರ್ಮಗುರುಗಳ ಮೇಲೆ ಹಲ್ಲೆಗೆ ಯತ್ನಿಸಿದ ಮೂವರನ್ನು ಕೊಣಾಜೆ ಪೊಲೀಸರು ಸೋಮವಾರ ನವೆಂಬರ್ 15 ರಂದು ಬಂಧಿಸಿದ್ದಾರೆ.
ಬಂಧಿತರನ್ನು ಬಂಟ್ವಾಳದ ಕಾರ್ನಾಡ್ ನಿವಾಸಿ ಶರಣ್ (24), ವಿಘ್ನೇಶ್ (23) ಮತ್ತು ಹರ್ಷಿತ್ (22) ಎಂದು ಗುರುತಿಸಲಾಗಿದೆ.
ನವೆಂಬರ್ 14 ರ ಭಾನುವಾರ ಮಧ್ಯರಾತ್ರಿ ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಬಂದು ದೂರುದಾರರ ಅಬ್ದುಲ್ ಸಮೀರ್ ಮನೆ ಬಳಿ ಬಂದ ಆರೋಪಿಗಳು ಮುಸ್ಲಿಂ ಸಮುದಾಯವನ್ನು ನಿಂದಿಸಿದ್ದಾರೆ ಎಂದು ಹೇಳಲಾಗಿದೆ. ದೂರುದಾರರು ಮನೆಯಿಂದ ಹೊರಗೆ ಬಂದಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಆ ಬಳಿಕ ಮಸೀದಿಗೆ ನುಗ್ಗಿ ಧರ್ಮಗುರುಗಳನ್ನು ನಿಂದಿಸಿ ಹಲ್ಲೆಗೆ ಯತ್ನಿಸಿದ್ದು ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದೂರು ನೀಡಲಾಗಿತ್ತು.