ಮಂಗಳೂರು, ನ12 (DaijiworldNews/MS): ಕುಖ್ಯಾತ ರೌಡಿ ಶೀಟರ್ ಖಾಲಿಯಾ ರಫೀಕ್ ಕೊಲೆ ಆರೋಪಿ ಝಿಯಾನನ್ನು ಕೇರಳ ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್ ಮುಂಬೈನಲ್ಲಿ ನ.11 ರ ಗುರುವಾರ ರಾತ್ರಿ ಬಂಧಿಸಿದೆ.
2017 ಫೆಬ್ರವರಿ 14ರಂದು ಕಾಸರಗೋಡಿನಿಂದ ನಾಲ್ವರು ಸಂಬಂಧಿಕರ ಜತೆ ಕಾರಿನಲ್ಲಿ ಮಂಗಳೂರಿಗೆ ಆಗಮಿಸುತ್ತಿದ್ದ ಖಾಲಿಯಾ ರಫೀಕ್’ನನ್ನು ಕೋಟೆಕಾರು ಪೆಟ್ರೋಲ್ ಪಂಪ್ ಬಳಿ ಗುಂಡು ಹೊಡೆದು, ಬಳಿಕ ತಲವಾರಿನಿಂದ ದಾಳಿ ಮಾಡಿ ಕೊಲೆ ಮಾಡಲಾಗಿತ್ತು. ದಾಳಿ ವೇಳೆ ತಪ್ಪಿಸಿಕೊಳ್ಳಲು ಕಾಲಿಯಾ ಓಡಿದ್ದರೂ ದಾಳಿ ನಡೆಸಿದ್ದ ಗ್ಯಾಂಗ್ ಆತನ ಮೇಲೆ ಗುಂಡು ಹಾರಿಸಿ ನಂತರ ತಲ್ವಾರ್ ನಿಂಡ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದರು.
ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಪ್ರಮುಖ ಆರೋಪಿ ಝಿಯಾ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ. ಈತ ವಿದೇಶದಿಂದ ಹಿಂತಿರುಗಿ ಬರುವ ಬಗ್ಗೆ ಮಾಹಿತಿ ಪಡೆದ ಎಟಿಎಸ್ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ.