ಉಡುಪಿ, ಅ 15: ಸುಮಾರು 2 ವರ್ಷಗಳ ಹಿಂದೆ ಮನೆ ಬಿಟ್ಟು ಹೋದ ಹುಡುಗ ಫೇಸ್ ಬುಕ್ ನೆರವಿನಿಂದ ಮನೆ ಸೇರಿದ ಅಪರೂಪದ ಘಟನೆ ಇಲ್ಲಿನ ಮಣಿಪಾಲದಲ್ಲಿ ನಡೆದಿದೆ. ಶ್ರೀಧರ್ ಅಮೀನ್ ಎಂಬವರ ಪುತ್ರ ಪ್ರೇಮಕಿರಣ್ ಎನ್ನುವಾತ 2015 ರ ಜನವರಿಯಲ್ಲಿ ಸಮೀಪದ ಕ್ರೀಡಾಂಗಣಕ್ಕೆ ಆಟವಾಡಲೆಂದು ಹೋದ ಬಳಿಕ ಅಲ್ಲಿಂದ ನಾಪತ್ತೆಯಾಗಿದ್ದ. ಈ ಹಿನ್ನಲೆಯಲ್ಲಿ ಪ್ರೇಮ್ ತಂದೆ ಮಣಿಪಾಲ ಠಾಣೆಗೆ ದೂರು ನೀಡಿದ್ದರು.
ಆದರೆ ನಾಪತ್ತೆಯಾದ ಹುಡುಗ ಪ್ರೇಮ್ ಕಿರಣ್ ಫೇಸ್ ಬುಕ್ ನಲ್ಲಿ ಸಕ್ರೀಯನಾಗಿದ್ದ . ಇದನ್ನು ಗಮನಿಸಿದ ಪೊಲೀಸರು ಸೈಬರ್ ಕ್ರೈಮ್ ವಿಭಾಗದ ನೆರವು ಪಡೆದು ಮುಂಬೈನ ದವಾ ಬಜಾರ್ ನಲ್ಲಿ ಪತ್ತೆ ಮಾಡುವಲ್ಲಿ ಪೊಲೀಸರು ಸಫಲರಾದರು. ಅ 9 ರಂದು ಆತನನ್ನು ಇಲ್ಲಿಗೆ ಕರೆತಂದ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ತನ್ನಿಚ್ಚೆಯಂತೆಯೇ ಮನೆ ಬಿಟ್ಟು ಹೋಗಿದ್ದು ತನ್ನನ್ನು ಯಾರು ಅಪಹರಿಸಿಲ್ಲ ಎನ್ನುವ ಹೇಳಿಕೆ ನೀಡಿದ್ದಾನೆ. ಓದಿನಲ್ಲಿ ಆಸಕ್ತಿ ಇಲ್ಲದೆ ಹಣ ಸಂಪಾದಿಸುವ ಉದ್ದೇಶದಿಂದ ಮನೆ ಬಿಟ್ಟು ತೆರಳಿದ್ದು ಈ ಕಾರಣಕ್ಕಾಗಿ ಮುಂಬೈನ ಕ್ಯಾಂಟೀನ್ ಒಂದರಲ್ಲಿ ಉದ್ಯೋಗದಲ್ಲಿರುವುದಾಗಿ ತಿಳಿಸಿದ್ದಾನೆ. ಮುಂದೆ ತಂದೆಯೊಂದಿಗೆ ವಾಸಿಸಲು ಅಭ್ಯಂತರವಿಲ್ಲ ಎಂದು ಪ್ರೇಮ್ ಕಿರಣ್ ಪೊಲೀಸ್ ರಿಗೆ ತಿಳಿಸಿದ್ದಾನೆ. ಒಟ್ಟಿನಲ್ಲಿ ಮನೆ ಮಗ ಪೇಸ್ ಬುಕ್ ನೆರೆವಿನಿಂದ ಮತ್ತೆ ಮನೆ ಸೇರಿದ್ದು ಶ್ರೀಧರ್ ಅಮೀನ್ ಅವರು ಮೊಗದಲ್ಲಿ ನಗು ಚೆಲ್ಲುವಂತೆ ಮಾಡಿದೆ.