ಮಲ್ಪೆ, ನ.09 (DaijiworldNews/HR): ಆಕಸ್ಮಿಕವಾಗಿ ದೋಣಿಯಿಂದ ಜಾರಿಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಮಲ್ಪೆ ಬಂದರಿನಲ್ಲಿ ನಡೆದಿದೆ.
ಮೃತಪಟ್ಟವರನ್ನು ಆಂಧ್ರಪ್ರದೇಶ ಮೂಲದ ಗರಿಕಾನ ದಾನಯ್ಯ (45) ಎಂದು ಗುರುತಿಸಲಾಗಿದೆ.
ಗರಿಕಾನ ದಾನಯ್ಯ ಅವರು ಆಕಸ್ಮಿಕವಾಗಿ ದೋಣಿಯಿಂದ ಜಾರಿಬಿದ್ದಿದ್ದು, ಅವರನ್ನು ರಕ್ಷಿಸಲು ಕೆಲವರು ಹಗ್ಗ ಎಸೆದರೂ ಹಿಡಿಯಲು ಸಾಧ್ಯವಾಗಲಿಲ್ಲ.
ಇನ್ನು ತಕ್ಷಣ ಈಶ್ವರ ಮಲ್ಪೆ ಮಾಹಿತಿ ಪಡೆದು ಬಂದರಿಗೆ ಧಾವಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.
ಮೃತದೇಹ ಅಜ್ಜರಕಾಡು ಜಿಲ್ಲಾಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ.
ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.