ಉಡುಪಿ, ನ.09 (DaijiworldNews/HR): ಕ್ರಿಸ್ಮಸ್ ಹಬ್ಬದ ಪ್ರಯುಕ್ತ ದಾಯ್ಜಿವಲ್ಡ್ ಉಡುಪಿ, ಕಿಶೂ ಎಂಟರ್ ಪ್ರೈಸಸ್, ಸಂತ ಮೆರಿಸ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಕನ್ನರ್ಪಾಡಿ ಇದರ ಆಶ್ರಯದಲ್ಲಿ "ನತಾಲ್ ಸೊಭಾಣ್ 2021" ಕ್ರಿಸ್ಮಸ್ ಫಿಯೆಸ್ತಾವನ್ನು ಆಯೋಜಿಸಿದೆ.
ಸ್ಪರ್ಧೆಯು ಡಿಸೆಂಬರ್ 5 ತಾರೀಕಿನಂದು ಉಡುಪಿಯ ಸಂತ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ಕನ್ನರ್ಪಾಡಿ ಇಲ್ಲಿ ನಡೆಯಲಿದೆ. ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ವಿಜೇತ ತಂಡಗಳಿಗೆ ಕ್ರಮವಾಗಿ 20 ಸಾವಿರ, 15 ಸಾವಿರ, 10 ಸಾವಿರ ನಗದು ಬಹುಮಾನ ಮತ್ತು ಟ್ರೋಫಿಯನ್ನು ಬಹುಮಾನವಾಗಿ ಪಡೆಯಲಿದ್ದಾರೆ.
ಆಸಕ್ತ ತಂಡಗಳು ನವೆಂಬರ್ 21 ರ ಒಳಗೆ ನೋಂದಾಯಿಸಬೇಕು.
ಸ್ಪರ್ಧೆಯ ನಿಯಮಗಳು:
· ಪ್ರತೀ ತಂಡಗಳಿಗೆ ಗರಿಷ್ಟ 15+3 ನಿಮಿಷಗಳ ಕಾಲಾವಕಾಶ ಇರುವುದು
· ತಂಡಗಳು ಕ್ರಿಸ್ಮಸ್ ಸಂಬಂಧಿಸಿದ ಟ್ಯಾಬ್ಲೋ ವನ್ನು ಪ್ರದರ್ಶಿಬೇಕು.
· ತಂಡದ ಪ್ರದರ್ಶನಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಿರಬೇಕು
· ನೃತ್ಯ ಮತ್ತು ನಾಟಕ ಕ್ಕೆ ಸಿಡಿ ಅಥವಾ ರೆಕಾರ್ಡೆಡ್ ಹಾಡುಗಳನ್ನು ಉಪಯೋಗಿಸಲು ಅವಕಾಶ ಇದೆ
· ಕ್ಯಾರಲ್ಸ್ ಗಾಯನಕ್ಕೆ ರೆಕಾರ್ಡೆಡ್ ಸಂಗೀತವನ್ನು ಬಳಸಲು ಅವಕಾಶ ಇಲ್ಲ
· ಕೊಂಕಣಿ, ಕನ್ನಡ, ಇಂಗ್ಲಿಷ್ ಭಾಷೆಗಳನ್ನು ಬಳಕೆ ಮಾಡಲು ಅವಕಾಶ ಇದೆ, ಆದರೆ ಎರಡು ಭಾಷೆಗಳ ಮಿಶ್ರಣಕ್ಕೆ ಅವಕಾಶ ಇಲ್ಲ
· ಭಾಗವಹಿಸುವ ತಂಡಗಳು ತಮ್ಮ ಇಗರ್ಜಿಯ ಪ್ರಧಾನ ಧರ್ಮಗುರುಗಳ ದೃಡೀಕರಣ ಪತ್ರವನ್ನು ಕೊನೆಯ ದಿನಾಂಕದ ಒಳಗೆ ದಾಯ್ಜಿವಲ್ಡ್ ಉಡುಪಿ ಕಚೇರಿಗೆ ತಲುಪಿಸುವುದು.
· ನೋಂದಾವಣೆ ಪತ್ರದಲ್ಲಿ ತಂಡಗಳು ನಿಖರ ಮಾಹಿತಿಯನ್ನು ನೀಡುವುದು.
· ವೇದಿಕೆಯ ಸಿದ್ದತೆಗೆ 3 ನಿಮಿಷಗಳ ಅವಕಾಶ ಇದೆ
· ತಂಡದ ಪ್ರದರ್ಶನಗಳು ಇತರರಿಗೆ ನೋವುಂಟು ಮಾಡವಂತೆ ಇರಬಾರದು
· ಪ್ರಾಣಿ ಮತ್ತು ಬೆಂಕಿಯ ಬಳಕೆಯನ್ನು ನಿಷೇಧಿಸಲಾಗಿದೆ
· ಪ್ರದರ್ಶನದ ಬಳಿಕ ವೇದಿಕೆಯನ್ನು ತಂಡಗಳೇ ಸ್ವಚ್ಛ ಮಾಡಬೇಕು
· ನಿರ್ದಿಷ್ಟ ಸಂಖ್ಯೆಯ ತಂಡಗಳು ಸ್ಪರ್ಧೆಗೆ ನೋಂದಾಯಿಸದ ಸಂಧರ್ಭದಲ್ಲಿ ಸ್ಪರ್ಧೇಯನ್ನು ರದ್ದು ಪಡಿಸುವ ಹಕ್ಕು ಆಯೋಜಕರಿಗೆ ಇದೆ
· ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರವನ್ನು ನೀಡಲಾಗುವುದು
· ತೀರ್ಪುಗಾಗರರ ತೀರ್ಮಾನವೇ ಅಂತಿಮ, ತೀರ್ಪುಗಾರರ ತೀರ್ಮಾನದ ಕುರಿತಾಗಿ ಯಾವುದೇ ಪ್ರತಿಕ್ರಿಯೆಗಳಿಗೆ ಆವಕಾಶ ಇಲ್ಲ
· ತಂಡದ ಪ್ರದರ್ಶನಗಳನ್ನು ದಾಯ್ಜಿವಲ್ಡ್ 24*7 ವಾಹಿನಿಯಲ್ಲಿ ಪ್ರಸಾರ ಮಾಡಲಾಗುವುದು
ವಿಶೇಷ ಸೂಚನೆ:
· ಸಂಗೀತಗಾರರು ಒಂದಕ್ಕಿಂತ ಅಧಿಕ ತಂಡಗಳಲ್ಲಿ ಭಾಗವಹಿಸಲು ಅವಕಾಶ ಇದೆ
· ಸಂಗೀತಗಾರರು ಒಂದು ತಂಡದಲ್ಲಿ ಸಂಗೀತಗಾರರಾಗಿ ಮತ್ತೊಂದು ತಂಡದಲ್ಲಿ ಗಾಯಕರಾಗಿ ಭಾಗವಹಿಸಲು ಅವಕಾಶ ಇಲ್ಲ
· ಪ್ರತಿ ತಂಡಕ್ಕೂ ಗರಿಷ್ಟ 3 ಸಂಗಿತ ವಾದ್ಯಗಳನ್ನು ಬಳಸಲು ಅವಕಾಶ ಇದೆ.
ನೋಂದಾವಣೆ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
7338637688 / 90 / 9900161556
ದಾಯ್ಜಿವಲ್ಡ್ ಉಡುಪಿ
3 ನೇಮಹಡಿ, ಮಾಂಡವಿ ಟ್ರೇಡ್ ಸೆಂಟರ್
ಕಡಿಯಾಳಿ, ಉಡುಪಿ - 576102
Email: daijiworldudupi@gmail.com