ಮಂಗಳೂರು, ನ. 08 (DaijiworldNews/SM): ಸುದೀರ್ಘ ಕೋವಿಡ್ ಸಮಯದ ಅಂತರದ ನಂತರ ದುಬೈ ಸೇರಿದಂತೆ ಗಲ್ಫ್ ದೇಶಗಳಿಗೆ ಪ್ರಯಾಣಿಸಲು ಕಾಯುತ್ತಿದ್ದ ಜನರಿಗೆ ವಿಮಾನದ ಶುಲ್ಕ ಶೇಕಡಾ 200 ರಷ್ಟು ಏರಿಕೆಯಾಗಿರುವುದರ ಮೂಲಕ ಭಾರೀ ಆಘಾತ ಎದುರಾಗಿದೆ.
ನವೆಂಬರ್ ೭ ರಂದು ಮಂಗಳೂರು, ಬೆಂಗಳೂರು ಮತ್ತು ಗೋವಾದಿಂದ ದುಬೈಗೆ ಟಿಕೆಟ್ ದರವು 21,000, 22,000, 28,000 ಮತ್ತು 31,000 ಇತ್ತು. ನವೆಂಬರ್ 8 ರಂದು ಇದು ಏರಿಕೆಯಾಗಿ 38,000 ದಿಂದ 50,000 ರೂಪಾಯಿಗಳಿಗೆ ತಲುಪಿದೆ.
ಕೋವಿಡ್ಗೆ ಮೊದಲು, ಕುವೈತ್ಗೆ ಟಿಕೆಟ್ ದರವು 13,000 ರೂಪಾಯಿಯಾಗಿತ್ತು. ಆದರೆ ವೆಚ್ಚವು ಈಗ 1.3 ಲಕ್ಷಕ್ಕೆ ಏರಿಕೆಯಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಅವರು ಹಿಂತಿರುಗಿದರೆ, ಅವರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ. ಎಲ್ಲಾ ವಿಮಾನಯಾನ ಸಂಸ್ಥೆಗಳು ಕೋವಿಡ್ ಅವಧಿಯಲ್ಲಿ ಅನುಭವಿಸಿದ ನಷ್ಟವನ್ನು ಸರಿದೂಗಿಸಲು ಪ್ರಯತ್ನಿಸುತ್ತಿವೆ ಮತ್ತು ಅವರು ವಿದೇಶಕ್ಕೆ ಹೋಗುವ ಕಾರ್ಮಿಕರ ರಕ್ತವನ್ನು ಹೀರುತ್ತಿದ್ದಾರೆ ಎಂದು ಇಲ್ಲಿನ ಟ್ರಾವೆಲ್ ಏಜೆಂಟೊಂದು ಪ್ರತಿಕ್ರಿಯೆ ನೀಡಿದೆ.
ಲಾಕ್ಡೌನ್ ಸಮಯದಲ್ಲಿ ಮರಳಿ ಬಂದು ಸಿಲುಕಿಕೊಂಡಿದ್ದ ಜನರು ಈಗ ಉದ್ಯೋಗಕ್ಕೆ ಮರಳುತ್ತಿದ್ದಾರೆ. ವಿಮಾನಯಾನ ಸಂಸ್ಥೆಗಳು ತಮ್ಮ ಸಂಕಷ್ಟದಿಂದ ಲಾಭ ಪಡೆಯುತ್ತಿವೆ. ಈ ಬೆಲೆಗಳು ಎರಡು ತಿಂಗಳ ಕಾಲ ಚಾಲ್ತಿಯಲ್ಲಿರುತ್ತವೆ ಮತ್ತು ಹಾರಲು ಆತುರವಿಲ್ಲದವರು ಬೆಲೆಗಳು ಕುಸಿಯುವವರೆಗೆ ಕಾಯಬಹುದು ಎಂದು ಇನ್ನೊಬ್ಬ ಟ್ರಾವೆಲ್ ಏಜೆಂಟ್ ಭವಿಷ್ಯ ನುಡಿದಿದ್ದಾರೆ.
ಈ ಹಿಂದೆ, ಮಂಗಳೂರಿನ ಜನರು ಹೆಚ್ಚಿನ ಟಿಕೆಟ್ ದರವನ್ನು ಪಾವತಿಸುವುದನ್ನು ತಪ್ಪಿಸಲು ಕಣ್ಣೂರು, ಬೆಂಗಳೂರು, ಕೊಚ್ಚಿ, ಗೋವಾ ಇತ್ಯಾದಿಗಳಿಂದ ವಿಮಾನಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ಈ ಬಾರಿ ಅಲ್ಲಿಯೂ ಬೆಲೆ ಏರಿಕೆಯಾಗಿದೆ. ಕಡ್ಡಾಯ ಕೋವಿಡ್ ಪರೀಕ್ಷೆಗಳ ಕಾರಣ, ಪ್ರಯಾಣಿಕರು ಐದು ಗಂಟೆಗಳ ಮುಂಚಿತವಾಗಿ ವಿಮಾನ ನಿಲ್ದಾಣಗಳನ್ನು ತಲುಪಬೇಕಾಗುತ್ತದೆ.