ಕಡಬ, ನ. 07 (DaijiworldNews/SM): ಕೋಳಿ ಹಿಡಿಯಲೆಂದು ಬಂದ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಕಡಬ ತಾಲೂಕಿನ ಕೊಂಬಾರು ಗ್ರಾಮದ ಕಮರ್ಕಜೆ ಎಂಬಲ್ಲಿ ರವಿವಾರ ಸಂಭವಿಸಿದೆ.
ಚಿರತೆಯು ಕಮರ್ಕಜೆ ನಿವಾಸಿ ರಾಮಯ್ಯ ಗೌಡ ಎಂಬವರ ಮನೆಯ ಸಮೀಪದ ಬಾವಿಗೆ ಬಿದ್ದಿದೆ. ಈ ವಿಚಾರ ಗಮನಿಸಿದ ಮನೆ ಮಂದಿ ಹಾಗೂ ಸ್ಥಳೀಯರ್ಯ್ ಅರಣ್ಯಾಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.