ಮುಂಬೈ, ಅ15: ಕೇಸ್ ಕೊಡಲು ಠಾಣೆಗೆ ಹೋದರೆ, ಜನಸಾಮಾನ್ಯ ರೊಂದಿಗೆ ಪೊಲೀಸರು ಯಾವ ರೀತಿ ವರ್ತಿಸುತ್ತಾರೆ ಎನ್ನುವುದು ಜಗಜ್ಜಾಹೀರ ವಿಷಯ. ಆದರೆ ಇದಕ್ಕೆಲ್ಲ ಅಪವಾದ ಎಂಬಂತೆ ಮುಂಬೈಯಲ್ಲಿ ಆಶ್ಚರ್ಯಕರ ರೀತಿಯಲ್ಲಿ ವರ್ತಿಸಿದ್ದಾರೆ. ದೂರು ಕೊಡಲು ವ್ಯಕ್ತಿಯೊಬ್ಬ ಪೊಲೀಸ್ ಠಾಣೆಯ ಮೆತ್ತಿಲು ಹತ್ತಿದ್ರೆ ಆತನಿಗೆ ಕೇಕ್ ತಿನ್ನಿಸಿ ಕಳುಹಿಸಿದ್ದಾರೆ. ಹೌದು ಅಕ್ಟೋಬರ್ 14 ರಂದು ಅನಿಶ್ ಎನ್ನೋ ಯವಕ ದೂರು ಕೊಡಲೆಂದು ಇಲ್ಲಿಯ ಶಕಿನಾಕ್ ಪೊಲೀಸ್ ಠಾಣೆಗೆ ಹೋಗಿದ್ದ. ದೂರಿನ ಪ್ರತಿಯನ್ನು ಪಡೆದುಕೊಂಡ ಪೊಲೀಸರು ಪರಿಶೀಲಿಸುತ್ತಿರುವಾಗ ಆತ ನಮೂದಿಸಿದ ವೈಯಕ್ತಿಕ ವಿವರಗಳಲ್ಲಿ ಆತನ ಹುಟ್ಟುಹಬ್ಬ ಆದೇ ದಿನ ಎನ್ನೋ ಮಾಹಿತಿ ತಿಳಿಯುತ್ತದೆ. ತಕ್ಷಣವೇ ಹೊರಗಡೆಯಿಂದ ಕೇಕ್ ತರಿಸಿದ್ದಾರೆ. ದೂರು ಕೊಡಲು ಬಂದ ಅನಿಶ್ಗೆ ಪೊಲೀಸ್ ಠಾಣೆಯೊಳಗೆಯೇ ಕೇಕ್ ತಿನ್ನಿಸಿ, ಆತನ ಹುಟ್ಟು ಹಬ್ಬ ಆಚರಿಸಿದ್ದಾರೆ. ಬಳಿಕ ಅನಿಶ್ ದೂರು ಸ್ವೀಕರಿಸಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಈ ಮೂಲಕ ಜನಸ್ನೇಹಿ ಶಕಿನಾಕ್ ಪೊಲೀಸರು ಎಂದು ಎಲ್ಲರ ಮೆಚ್ಚುಗೆಗೆ ಪಾತ್ರವಾದರು.