ಕಾಸರಗೋಡು, ನ. 05 (DaijiworldNews/SM): ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಎಂದಿನಂತೆ ಪತ್ತೆಯಾಗಿದ್ದು, ಗುರುವಾರದಂದು 125 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
196 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 865 ಮಂದಿ ಚಿಕಿತ್ಸೆಯಲ್ಲಿದ್ದಾರೆ. 7,444 ಮಂದಿ ನಿಗಾದಲ್ಲಿದ್ದಾರೆ.
ಇದುವರೆಗೆ 1,39,233 ಮಂದಿಗೆ ಸೋಂಕು ದ್ರಢಪಟ್ಟಿದ್ದು, ಈ ಪೈಕಿ 1,37,330 ಮಂದಿ ಗುಣಮುಖರಾಗಿದ್ದಾರೆ. 613 ಮಂದಿ ಈ ತನಕ ಮೃತಪಟ್ಟಿದ್ದಾರೆ.