ಉಡುಪಿ, ನ.05 (DaijiworldNews/PY): ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧಿಕೃತ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಖುದ್ದಾಗಿ ಸಚಿವರೇ ಮಾಹಿತಿ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ನಿನ್ನೆ ನನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವ್ಯತ್ಯಾಸ ಕಂಡು ಬಂದಿದ್ದು ಹ್ಯಾಕ್ ಆಗಿರುವ ಲಕ್ಷಣಗಳು ಗೋಚರಿಸಿತ್ತು.ಈ ಬಗ್ಗೆ ಕಾನೂನು ರೀತಿಯಾಗಿ ಕಾರ್ಯಚಟುವಟಿಕೆ ನಡೆಸಿದ್ದು ಇಂದು ಎಲ್ಲವೂ ಸುಖಾಂತ್ಯ ಕಂಡಿದೆ. ಮತ್ತೆ ಎಂದಿನಂತೆ ಟ್ವಿಟರ್ ಮೂಲಕ ಲಭ್ಯವಿರಲಿದ್ದೇನೆ. ಸಹಕರಿಸಿದ ಮಾಧ್ಯಮ ಮಿತ್ರರಿಗೆ, ಪೊಲೀಸ್ ಇಲಾಖೆಗೆ ಧನ್ಯವಾದಗಳು" ಎಂದು ತಿಳಿಸಿದ್ದಾರೆ.