ಬೆಂಗಳೂರು,ನ 18 (MSP): ತಮ್ಮ ಪದಗ್ರಹಣ ಸಮಾರಂಭಕ್ಕೆ ನೀಲಿ ಬಣ್ಣದ ಸೀರೆ ಮತ್ತು ಕುತ್ತಿಗೆ ಮುಚ್ಚುವಂತಹ ಬ್ಲೌಸ್ ತೊಡಬೇಕು. ಲಿಪ್ ಸ್ಟಿಕ್ ಸೇರಿ ಯಾವುದೇ ರೀತಿಯ ಮೇಕಪ್ ಮಾಡಿಕೊಳ್ಳಬಾರದು, ವಿಪರೀತ ಒಡವೆಗಳನ್ನು ಧರಿಸಬಾರದು. ಸ್ಕರ್ಟ್ ಹಾಗೂ ಸ್ಲೀವ್ ಲೆಸ್ ಉಡುಪು ತೊಟ್ಟು ಭಾಗವಹಿಸಬಾರದು ಎಂದು ಮಹಿಳಾ ಕಾರ್ಯಕರ್ತರಿಗೆ ಕೆಪಿಸಿಸಿ ಮಹಿಳಾ ಘಟಕದ ನೂತನ ಅಧ್ಯಕ್ಷ ಪುಷ್ಪಾ ಅಮರನಾಥ್ ಡ್ರೆಸ್ ಕೋಡ್ ವಿಧಿಸಿದ್ದಾರೆ ಎನ್ನಲಾಗಿದ್ದು, ಇದು ಪಕ್ಷದಲ್ಲೇ ವ್ಯಾಪಕ ಟೀಕೆಗೆ ಒಳಗಾಗಿದೆ.
ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪುಷ್ಪ ಅವರ ಪ್ದಗ್ರಹಣ ಸಭೆಯನ್ನು ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಜಯಂತಿ ದಿನವಾದ ನ.೧೯ ರಂದು ಆಯೋಜಿಸಲಾಗಿದೆ. ಈ ಸಭೆಯ ಪೂರ್ವಭಾವಿ ಸಭೆಯಲ್ಲಿ ಪುಷ್ಪಾ ಈ ರೀತಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಪಕ್ಷದ ಮಹಿಳಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಕಾಂಗ್ರೆಸ್ ನೂತನ ಅಧ್ಯಕ್ಷೆಯಾದ ತಕ್ಷಣ ಇಂತಹ ಸೂಚನೆ ನೀಡುವುದು ಎಷ್ಟು ಸರಿ? ನಾವು ಯಾವ ಬಟ್ಟೆ ಹಾಕಿಕೊಳ್ಳಬೇಕು ಅನ್ನುವುದನ್ನು ಅಧ್ಯಕ್ಷರು ತೀರ್ಮಾನ ಮಾಡಬೇಕಾ,? ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ವಲಯದಲ್ಲಿ ಆಕ್ಷೇಪಗಳು ಕೇಳಿ ಬಂದಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ನೂತನ ಅಧ್ಯಕ್ಷ ಪುಷ್ಪಾ ಅಮರನಾಥ್ , ನ.೧೯ ರಂದು ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರ ಜಯಂತಿ ದಿನವೂ ಆಗಿರುವುದರಿಂದ ಶಿಸ್ತಿನಿಂದ ಬರುವಂತೆ ಹೇಳಿದ್ದೆ. ಆದರೆ ಅದನ್ನೇ ಯಾರೋ ಅಪಾರ್ಥ ಮಾಡಿಕೊಂಡು ವಿವಾದ ಸೃಷ್ಟಿಸಿದ್ದಾರೆ. ಜಯಂತಿ ಆಗಿರುವ ಕಾರಣ ಮದುವೆ ಬರುವಂತೆ ರೇಷ್ಮೆ ಸೀರೆ. ಸಿಕ್ಕಾಪಟ್ಟೆ ಒಡವೆ ತೊಡಬೇಡಿ ಅಂದಿದ್ದೆ. ಆದರೆ ಲಿಪ್ ಸ್ಟಿಕ್ ಹಚ್ಚಬೇಡಿ ಅಂದೆಲ್ಲಾ ಹೇಳಿಲ್ಲಾ. ನಾನೇ ಅಲಂಕಾರ ಮಾಡಿಕೊಳ್ಳತ್ತೇನೆ ಲಿಪ್ ಸ್ಟಿಕ್ ಹಚ್ಚುತ್ತೇನೆ. ಹೀಗಿರುವಾಗ ಆ ರೀತಿ ನಾನ್ಯಕೆ ಹೇಳಲಿ ? ವಸ್ತ್ರ ಸಂಹಿತೆ ಕಟ್ಟುಪಾಡು ವಿಧಿಸಿಲ್ಲ ಎಂದರು.