ಮಂಗಳೂರು, ನ 02 (DaijiworldNews/MS): ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ಈ ಭಾರಿ ನಡೆದ ಅಖಿಲ ಭಾರತ ಮಟ್ಟದ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ತೇಜಸ್ ಹಾಗೂ ತನುಷ್ ಗೌಡ ವಿ. ಅವರು 720ರಲ್ಲಿ 700 ಅಂಕ ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ.
ತೇಜಸ್, ತನುಷ್ ಗೌಡ ವಿ., ರಿತಮ್
ತನುಷ್ ಗೌಡ ವಿ. ಜನರಲ್ ಮೆರಿಟ್ನಲ್ಲಿ 162ನೇ ರ್ಯಾಂಕ್, ಓಬಿಸಿ ಕ್ಯಾಟಗರಿಯಲ್ಲಿ 33ನೇ ರ್ಯಾಂಕ್, ತೇಜಸ್ ಜನರಲ್ ಮೆರಿಟ್ನಲ್ಲಿ 165ನೇ ರ್ಯಾಂಕ್, ಕ್ಯಾಟಗರಿಯಲ್ಲಿ 121ನೇ ರ್ಯಾಂಕ್ ಹಾಗೂ ರಿತಮ್ 720ರಲ್ಲಿ 695 ಅಂಕ ಪಡೆದು ಜನರಲ್ ಮೆರಿಟ್ನಲ್ಲಿ 307ನೇ ಹಾಗೂ ಕ್ಯಾಟಗರಿಯಲ್ಲಿ 220ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.ಅಭೂತಪೂರ್ವ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಂಸ್ಥೆ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅಭಿನಂದಿಸಿದ್ದಾರೆ.