ಮಂಗಳೂರು, ನ 02 (DaijiworldNews/MS): ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್) 2021ರ ಫಲಿತಾಂಶ ಪ್ರಕಟವಾಗಿದ್ದು, ಮಂಗಳೂರಿನ ಜಶಾನ್ ಛಾಬ್ರಾ ಸೇರಿದಂತೆ ರಾಜ್ಯದ ಇಬ್ಬರು ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದಲ್ಲಿ (ಎಐಆರ್) 5ನೇ ರ್ಯಾಂಕ್ ಪಡೆಯುವ ಮೂಲಕ ಕರ್ನಾಟಕ ಟಾಪರ್ ಎಂಬ ಕೀರ್ತಿ ಪಡೆದಿದ್ದಾರೆ.
2021ನೇ ಸಾಲಿನ ನೀಟ್ ಪರೀಕ್ಷೆ ರಾಜ್ಯಾದ್ಯಂತ 202 ಪರೀಕ್ಷಾ ಕೇಂದ್ರಗಳಲ್ಲಿ ಸೆ.12ರಂದು ನಡೆದಿತ್ತು. ಒಟ್ಟು 16.1 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ ಮೊದಲ 20 ರ್ಯಾಂಕ್ ಪಡೆದ ವಿದ್ಯಾರ್ಥಿಗಳಲ್ಲಿ ಕರ್ನಾಟಕದವರು ಇವರಿಬ್ಬರು ಮಾತ್ರ.
ಆಕಾಶ್ ಇನ್ಸ್ಟ್ರಿಟ್ಯೂಟ್ ನಲ್ಲಿ ಕೊಂಚಿಂಗ್ ಪಡೆದ ಮಂಗಳೂರಿನ ಜಶಾನ್ ಛಾಬ್ರಾ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ನ ವಿದ್ಯಾರ್ಥಿಯಾಗಿದ್ದು 720ರಲ್ಲಿ 715 ಅಂಕ ಪಡೆದಿದ್ದಾರೆ. ಜಶನ್ ಛಾಬ್ರಾ ಸಿಬಿಎಸ್ಇ 12ನೇ ತರಗತಿ ಪರೀಕ್ಷೆಯಲ್ಲಿ ಶೇ.97.2 ಪಡೆದು ಕಾಲೇಜಿನಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು. ನೀಟ್ನಲ್ಲಿ 5ನೇ ರ್ಯಾಂಕ್ ಪಡೆಯುವ ಮೂಲಕ ಇದೀಗ ದೇಶದ ಅಗ್ರಮಾನ್ಯ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಅವಕಾಶವನ್ನು ಹೊಂದಿದ್ದಾರೆ. ಇವರು ಮಂಗಳೂರಿನ ಮೇರಿಹಿಲ್ ನಿವಾಸಿಯಾದ ಸಂಜೀವ್ ಕುಮಾರ್ ಛಾಬ್ರಾ ಹಾಗೂ ಅನಿತಾ ದಂಪತಿಗಳ ಪುತ್ರರಾಗಿದ್ದಾರೆ.