ಮಂಗಳೂರು, ನ 02 (DaijiworldNews/MS): ಅವಿಭಜಿತ ಜಿಲ್ಲೆಯಲ್ಲಿ 1 ರಿಂದ 10ನೇ ತರಗತಿಯವರೆಗೆ ಭೌತಿಕ ತರಗತಿಗಳು ಇಂದಿನಿಂದ (ನವೆಂಬರ್ 2ರಿಂದ) ಪೂರ್ಣ ದಿನ ನಡೆಯಲಿದೆ ಈ ಮೂಲಕ ಸುಮಾರು ಒಂದೂವರೆ ವರ್ಷದ ಬಳಿಕ ತರಗತಿಗಳು ಪೂರ್ಣ ದಿನ ಮೊದಲಿನಂತೆಯೇ ಕಾರ್ಯನಿರ್ವಹಿಸಲಿದೆ.
ಈಗಾಗಲೇ ಶಾಲೆ ಆರಂಭವಾಗಿದ್ದರೂ ಒಂದರಿಂದ ಹತ್ತರವರೆಗೆ ಪೂರ್ಣಪ್ರಮಾಣದಲ್ಲಿ ತರಗತಿಗಳು ನಡೆಯುತ್ತಿರಲಿಲ್ಲ. ಕೆಲವೆಡೆ ಮಧ್ಯಾಹ್ನದವರೆಗೆ, ಮಧ್ಯಾಹ್ನ ನಂತರ ಹಾಗೂ ದಿನ ಬಿಟ್ಟು ದಿನ ಹೀಗೆ ತರಗತಿಗಳು ಕೆಲವು ಶಾಲೆಗಳಲ್ಲಿ ನಡೆಯುತ್ತಿತ್ತು. ಇದೀಗ ಸರಕಾರ ನಿರ್ದೇಶನದಂತೆ ಎಲ್ಲ ತರಗತಿಗಳು ದಿನಪೂರ್ತಿ ನಡೆಯಲಿದೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 9.30 ರಿಂದ ಸಂಜೆ 4 ಗಂಟೆಗೆ ತರಗತಿಗಳು ನಡೆಯಲಿದೆ. ಶನಿವಾರದಂದು ಮಧ್ಯಾಹ್ನ 1 ಗಂಟೆಯವರೆಗೆ ತರಗತಿ ಇದೆ. ಇಷ್ಟು ದಿನ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲದಿದ್ದರೂ ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುತ್ತಿರುವ ವಿಶೇಷವಾಗಿದೆ.