ಕಾರ್ಕಳ, ನ. 01 (DaijiworldNews/SM): ತೆಂಗಿನ ಕಾಯಿ ಕೊಯ್ಯಲೆಂದು ಮರವೇರಿದ್ದ ವ್ಯಕ್ತಿ ಆಕಸ್ಮಿಕವಾಗಿ ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ತಾಲೂಕಿನ ಪಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ನಿತ್ಯಾನಂದ ಪ್ರಭು(41) ಎಂಬವರು ಘಟನೆಯಲ್ಲಿ ಮೃತ ದುರ್ದೈವಿಯಾಗಿದ್ದಾರೆ. ಕೃಷಿ, ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಅಕ್ಟೋಬರ್ 31ರ ಮಧಾಹ್ನ 11.30ರ ವೇಳೆಗೆ ಮನೆಯ ತೆಂಗಿನ ಮಕ್ಕೇರಿದ್ದರು. ಈ ವೇಳೆ ಆಕಸ್ಮಿಕವಾಗಿ ಮರದಿಂದ ನೆಲಕ್ಕೆ ಬಿದ್ದ ಅವರ ತಲೆಗೆ, ಕೈ,ಕಾಲಿಗೆ ಗಂಭೀರ ಗಾಯ ಉಂಟಾಗಿತ್ತು.