ಬೆಂಗಳೂರು, ನ 17(SM): ನನಗೆ ಜಾರಿ ನಿರ್ದೇಶನಾಲಯದಿಂದ ಯಾವುದೇ ನೊಟೀಸ್ ಬಂದಿಲ್ಲ. ಆದರೆ ಬೇರೆ ನೊಟೀಸ್ ಬಂದಿದೆ ಎಂದು ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಇಡಿಯಿಂದ ನೊಟೀಸ್ ಬಂದಿಲ್ಲ, ಬದಲಿಗೆ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯೊಂದರಿಂದಲೇ ನೊಟೀಸ್ ಬಂದಿದೆ. ಆದರೆ ಅದು ಯಾವುದೆಂದು ಬಹಿರಂಗಪಡಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ನೊಟೀಸ್ ಬಂದಾಗ ನಾನು ಮನೆಯಲ್ಲಿ ಇರಲಿಲ್ಲ. ಹಾಗಾಗಿ ಮನೆಮಂದಿ ಅದನ್ನು ಇಡಿ ನೊಟೀಸ್ ಎಂದು ತಪ್ಪಾಗಿ ಭಾವಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ ಬಂದಿರುವ ನೊಟೀಸ್ ಯಾವ ಇಲಾಖೆಯಿಂದ ಎಂಬುವುದನ್ನು ತಿಳಿಸಲು ಅವರು ನಿರಾಕರಿಸಿದರು.
ಈ ಹಿಂದೆ ಬಂದಿರುವ ನೊಟೀಸ್ಗೆ ನಾನೇ ಉತ್ತರ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ನೊಟೀಸ್ ಬಗ್ಗೆ ವಿವರವಾಗಿ ಮಾತನಾಡುತ್ತೇನೆ. ನನಗೂ ಜನರಿಗೆ ತಿಳಿಸಲು ಬಹಳ ವಿಷಯಗಳಿವೆ ಎಂದು ಸಚಿವ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.