ಮಂಗಳೂರು, ನ17(SS): ಕರಾವಳಿಯಲ್ಲಿ ನವೆಂಬರ್ 24ರಿಂದ ಕಂಬಳದ ಋತು ಆರಂಭವಾಗಲಿದ್ದು, ಕಕ್ಯಪದವು ಕಂಬಳದೊಂದಿಗೆ ವೀರಕ್ರೀಡೆಗೆ ಚಾಲನೆ ಸಿಗಲಿದೆ. ಆ ಬಳಿಕ 2019ರ ಮಾರ್ಚ್ 23ರವರೆಗೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡಿನ ವಿವಿಧೆಡೆ ಕಂಬಳ ನಡೆಯಲಿದೆ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್. ಶೆಟ್ಟಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ಜಿಲ್ಲೆಯಲ್ಲಿ ಒಟ್ಟು18 ಕಂಬಳಗಳು ನಡೆಯಲಿದೆ. ಸರಕಾರ ಮತ್ತು ನ್ಯಾಯಾಲಯಗಳ ಸೂಚನೆಯಂತೆ ಈ ಬಾರಿ 24 ಗಂಟೆಯೊಳಗೆ ಕಂಬಳ ಮುಗಿಸಲು ಸಮಿತಿ ತೀರ್ಮಾನ ಕೈಗೊಂಡಿದೆ ಎಂದು ಹೇಳಿದ್ದಾರೆ.
ವೀರಕ್ರೀಡೆ ಕಂಬಳಕ್ಕೆ ಶತಮಾನದ ಇತಿಹಾಸ ಹಾಗೂ ಧಾರ್ಮಿಕ ಪರಂಪರೆಯ ಹಿನ್ನಲೆಯಿದೆ. ಕರಾವಳಿ ಕರ್ನಾಟಕದ ಭಾಗದಲ್ಲಿ ಕಂಬಳ ಜನಪ್ರಿಯವಾಗಿದ್ದು, ಆಕರ್ಷಣೀಯವಾದ ಕ್ರೀಡೆಯಾಗಿದೆ. ನವೆಂಬರ್ನಿಂದ ಮಾರ್ಚ್ವರೆಗಿನ ಐದು ತಿಂಗಳ ಕಾಲ ಕಂಬಳ ಕರಾವಳಿಯಲ್ಲಿ ವೈಭವದಿಂದ ನಡೆಯುತ್ತದೆ. ತುಳುಸಂಸ್ಕೃತಿಯಲ್ಲಿ ಕಂಬಳಕ್ಕಕೆ ವಿಶಿಷ್ಟವಾದ ಗೌರವವಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳಕ್ಕೆ ಸೇರಿರುವ ಕಾಸರಗೋಡು ಜಿಲ್ಲೆಗಳಲ್ಲಿ ಕಂಬಳವನ್ನು ನಡೆಸುತ್ತಾರೆ.