ಕಾಸರಗೋಡು, ಅ 15: ಲಾರಿ ಮತ್ತು ಕಂಟೈನರ್ ಡಿಕ್ಕಿ ಹೊಡೆದು ಓರ್ವ ಚಾಲಕ ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡ ಘಟನೆ ರವಿವಾರ ಬೆಳಿಗ್ಗೆ ರಾಷ್ಟೀಯ ಹೆದ್ದಾರಿಯ ಕುಂಬಳೆ ಸೇತುವೆ ಬಳಿ ನಡೆದಿದೆ. ಡಿಕ್ಕಿ ಹೊಡೆದ ಕಂಟೈನರ್ ಲಾರಿ ರಸ್ತೆ ಬದಿಯ ಹೊಂಡಕ್ಕೆ ಮಗುಚಿ ಬಿದ್ದ ಪರಿಣಾಮ, ಓರ್ವನ ಸ್ಥಿತಿ ಗಂಭೀರವಾಗಿದೆ. ಮೃತಪಟ್ಟವರನ್ನು ಮೀನು ಸಾಗಾಟ ಲಾರಿ ಚಾಲಕ ಚಾಲಕ ಆಲಪ್ಪುಯ ಚೇರ್ತಲದ ಬಿಜು ಎರಮಳ್ಳೂರು (45) ಎಂದು ಗುರುತಿಸಲಾಗಿದೆ. ಜೊತೆಗಿದ್ದ ಆಲಪ್ಪುಯ ದ ಬಾಬು ( 39) ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಂಟೈನರ್ ಲಾರಿಯಲ್ಲಿದ್ದ ಉತ್ತರ ಪ್ರದೇಶದ ಸಂತೋಷ್ , ಸಂತಿನ್ ಗಾಯಗೊಂಡಿದ್ದು , ಆಸ್ಪತ್ರೆಗೆ ದಾಖಲಿಸಲಾಗಿದೆ. ಆರಿಕ್ಕಾಡಿ ಮತ್ತು ಕುಂಬಳೆ ಸೇತುವೆ ನಡುವೆ ಈ ಅಪಘಾತ ನಡೆದಿದೆ.ಮಂಗಳೂರಿನಿಂದ ಆಲಪ್ಪುಯಕ್ಕೆ ತೆರಳುತ್ತಿದ್ದ ಮೀನು ಲಾರಿ ಮರತ್ತು ಮತ್ತು ಮಂಗಳೂರು ಕಡೆಗೆ ಬರುತ್ತಿದ್ದ ಕಂಟೈನರ್ ಲಾರಿ ನಡುವೆ ನಡುವೆ ಅಪಘಾತ ನಡೆದಿದೆ.ಚಾಲಕನ ನಿಯಂತ್ರಣ ತಪ್ಪಿದ ಲಾರಿ ಸಮೀಪದ ಹೊಂಡಕ್ಕೆ ಮಗುಚಿ ಬಿದ್ದಿದೆ .ಅಪಘಾತದ ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತು .ಕುಂಬಳೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಂಚಾರ ಸುಗಮಗೊಳಿಸಿದರು.