ಕಾಸರಗೋಡು, ಅ. 30(DaijiworldNews/HR): ಬೈಕ್ ಮತ್ತು ಲಾರಿ ನಡುವೆ ಉಂಟಾದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟವರನ್ನು ದೈವ ಕೋಲ ನರ್ತಕ ಕಾಞ೦ಗಾಡ್ ಆನಂದಾಶ್ರಮ ಸಮೀಪದ ಸೂರಜ್ ಪಣಿಕ್ಕರ್ (45) ಎಂದು ಗುರುತಿಸಲಾಗಿದೆ.
ಶುಕ್ರವಾರ ರಾತ್ರಿ ಪಡನ್ನಕ್ಕಾಡ್ ಸಮೀಪ ಲಾರಿ ಮತ್ತು ಸೂರಜ್ ಚಲಾಯಿಸುತ್ತಿದ್ದ ಬೈಕ್ ನಡುವೆ ಅಪಘಾತ ನಡೆದಿದೆ.
ಗಂಭೀರ ಗಾಯಗೊಂಡ ಇವರನ್ನು ಆಸ್ಪತ್ರೆಗೆ ತಲಪಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಹೊಸದುರ್ಗ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.