ಮಂಗಳೂರು, ನ17(SS): ವಿಧಾನ ಪರಿಷತ್ ಸದಸ್ಯ ಮತ್ತು ಉದ್ಯಮಿ ಬಿ.ಎಂ. ಫಾರೂಕ್ ಅವರ ಪುತ್ರಿಯ ಮದುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದ್ಧೂರಿಯಾಗಿ ನಡೆದಿದ್ದು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕುಟುಂಬ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ನಗರ ಹೊರವಲಯದ ಉಳ್ಳಾಲ ಕಡಲ ಕಿನಾರೆಯಲ್ಲಿ ಸ್ವತಃ ಫಾರೂಕ್ ಕಟ್ಟಿಸಿರುವ ನೂತನ ರೆಸಾರ್ಟ್ ಸ್ಯಾಂಡ್ ಬೀಚ್ ನಲ್ಲಿ ಈ ಮದುವೆ ಕಾರ್ಯ ನಡೆದಿದೆ. ಈ ಮದುವೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ, ಜೆಡಿಎಸ್ ವರುಷ್ಠ ದೇವೇಗೌಡ, ಪತ್ನಿ ಚನ್ನಮ್ಮ, ಶಾಸಕಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್, ಸಚಿವ ಎಚ್.ಡಿ. ರೇವಣ್ಣ, ಪುತ್ರ ಪ್ರಜ್ವಲ್ ಮತ್ತು ಸಚಿವ ಬಸವರಾಜ್ ಹೊರಟ್ಟಿ, ಸಚಿವ ಜಮೀರ್ ಅಹ್ಮದ್ ಸೇರಿದಂತೆ ಜೆಡಿಎಸ್ ಹಾಗೂ ಕಾಂಗ್ರೆಸ್ ನ ಹಲವು ಮುಖಂಡರು ಪಾಲ್ಗೊಂಡಿದ್ದದ್ದಾರೆ.
ಬಿ.ಎಂ. ಫಾರೂಕ್ ಅವರ ಪುತ್ರಿಗೆ ಕೇರಳದ ಹುಡುಗನನ ಜೊತೆ ಮದುವೆ ನಡೆದಿದ್ದು, ಈ ಮದುವೆ ಕಾರ್ಯ ಮೂರು ದಿನ ನಡೆಯಲಿದೆ ಎಂದು ತಿಳಿದುಬಂದಿದೆ.