ಮಂಗಳೂರು, ಅ15 : ಇಲ್ಲಿನ ಬೈಕಂಪಾಡಿಯ ಬರ್ಟ್ರಂಡ್ ರಸೆಲ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಶನಿವಾರ ಹಾರೆ , ಪಿಕ್ಕಾಸು ,ಗುದ್ದಲಿ ಹಿಡಿದು ತಯಾರಾಗಿದ್ದರು. ಕಾರಣ ಇಲ್ಲಿನ ಸೇತುವೆ ಮೇಲ್ಬಾಗದ ಡಾಮಾರು ಕಿತ್ತುಹೋಗಿದ್ದು, ವಾಹನ ಸವಾರರ ಪಾಲಿಗೆ ಮಾರಕವಾಗಿ ಪರಿಣಮಿಸಿತ್ತು. ಹೆದ್ದಾರಿ ಇಲಾಖೆ ಈ ಸಮಸ್ಯೆಯನ್ನು ನಿರ್ಲಕ್ಷಿಸಿದ ಪರಿಣಾಮ ಈ ವಿದ್ಯಾರ್ಥಿಗಳು ಹೊಂಡ ತುಂಬಿಸಿ ಸಾಮಾಜಿಕ ಕಳಕಳಿ ತೋರಿದರು. ಕೆಂಪು ಕಲ್ಲುಗಳನ್ನು ಬಳಸಿ ಹೊಂಡಗಳುನ್ನು ಮುಚ್ಚಿ ಸರಿಪಡಿಸಿದರು.ಈ ವೇಳೆ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು ಸ್ಥಳೀಯ ಪೊಲೀಸರು ಸಾಥ್ ಟ್ರಾಫಿಕ್ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದರು.
ಇದರ ನೇತೃತ್ವ ವಹಿಸಿದ್ದ ಶಾಲಾ ಸಂಚಾಲಕಿ ನಿಶಾ ಲಕ್ಷ್ಮಣ್, ಶಾಲಾ ಮಂಡಳಿಯ ಅಧ್ಯಕ್ಷ , ಅಬೂಬಕರ್ ಕೃಷ್ಣಾಪುರ , ಮಂಗಳೂರು ಉತ್ತರ ಠಾಣೆಯ ಪಿಐ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.