ಕುಂದಾಪುರ,ನ 16 (MSP):ಕುಂದಾಪುರ ತಾಲೂಕಿನ ಸಲ್ವಾಡಿಯ ಕಕ್ಕೇರಿ ಆಸುಪಾಸಿನ ಜನವಸತಿ ಪ್ರದೇಶದತ್ತ ಆಹಾರ ಅರಸಿ ಬಂದು ಜನರಲ್ಲಿ ಆತಂಕ ಸೃಷ್ಟಿಸಿದ ಚಿರತೆ ನ.16ರ ಗುರುವಾರ ರಾತ್ರಿ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ.
ಸಲ್ವಾಡಿಯ ಕಕ್ಕೇರಿ ಸಮೀಪದ ಹಾಡಿ ಪ್ರದೇಶದಲ್ಲಿ ಹಲವಾರು ದಿನಗಳಿಂದ ಚಿರತೆಗಳ ಓಡಾಟವನ್ನು ಜನರು ಪ್ರತ್ಯಕ್ಷವಾಗಿ ಕಂಡಿದ್ದರು. ಸ್ಥಳಿಯ ಜನರ ಮಾಹಿತಿಯ ಮೇರೆಗೆ ಸೂಕ್ತ ಸ್ಥಳದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ವಾರಗಳಿಂದ ಬೋನ್ ಇಟ್ಟು ನಾಯಿ ಕಟ್ಟಿ ಚಿರತೆ ಸೆರೆಗೆ ಮುಂದಾಗಿದ್ದರು. ಇಂದು ಶುಕ್ರವಾರ ಬೆಳಿಗ್ಗೆ ಬೋನಿನಲ್ಲಿ ಚಿರತೆ ಬಿದ್ದಿದ್ದು ಕಂಡ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆಯಾದ ಆರು ವರ್ಷ ಪ್ರಾಯದ ಗಂಡು ಚಿರತೆಯನ್ನು ವನ್ಯಜೀವಿ ವಲಯಕ್ಕೆ ರವಾನಿಸಲಾಗಿದೆ
ಕಾರ್ಯಾಚರಣೆ ಯಲ್ಲಿ ಡಿ.ಎಫ್.ಒ ಪ್ರಭಾಕರನ್ ಎ.ಸಿ.ಎಫ್ ಲೋಹಿತ್, ಆರ್.ಎಫ್.ಒ ಪ್ರಭಾಕರ್ ಕುಲಾಲ್, ಉಪವಲಯ ಅರಣ್ಯಾಧಿಕಾರಿ ಉದಯ್, ಸೋಮಶೇಖರ್, ಇಲಾಖೆ ವಾಹನ ಚಾಲಕ ಅಶೋಕ್ ಭಾಗಿಯಾಗಿದ್ದರು.