ಬೆಂಗಳೂರು, ನ16 (MSP):ಇನ್ಮುಂದೆ ಇಂದಿರಾ ಕ್ಯಾಂಟೀನ್ಗಳಲ್ಲಿ ಟೀ, ಕಾಫಿ ಸಿಗುವುದು ಬಹುತೇಕ ಖಚಿತ ಎಂದು ಸಚಿವ ಜಿ. ಪರಮೇಶ್ವರ ತಿಳಿಸಿದರು ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ವತಿಯಿಂದ ಜನವರಿಯಿಂದ ಇಂದಿರಾ ಕ್ಯಾಂಟೀನ್ ಗಳಲ್ಲಿ ಟೀ, ಕಾಫಿ ನೀಡಲು ಮುಂದಾಗಿದೆ ಎಂದರು.
ಈಗಾಗಲೇ ಬೆಳಗಿನ ಹೊತ್ತು 5ಕ್ಕೆ ತಿಂಡಿ ನೀಡಲಾಗುತ್ತಿದೆ. ಅದೇ ಸ್ಥಳದಲ್ಲಿ ಐದು ರೂಪಾಯಿ ಟೀ ಅಥವಾ ಕಾಫಿ ಜೊತೆಗೆ ವಡಾ ನೀಡಲು ತೀರ್ಮಾನಿಸಲಾಗಿದೆ. ಸಾರ್ವಜನಿಕರ ಕಡೆಯಿಂದ ಬಂದ ಸಲಹೆ ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ಕಾಫಿ ಅಥವಾ ಟೀಗೆ 5ರೂ. ಪಾವತಿಸಬೇಕು. ತಿಂಡಿ ಕಾಫಿ ತೆಗೆದುಕೊಂಡಾಗ ಅದರ ಜತೆ ವಡೆ, ಬಜ್ಜಿ , ಬೋಂಡಾ ಮೂರರಲ್ಲಿ ಯಾವುದಾದರು ಒಂದನ್ನು ನೀಡಲಾಗುತ್ತದೆ ಎಂದರು. ಊಟ, ತಿಂಡಿಗೆ ಸರ್ಕಾರ ಸಬ್ಸಿಡಿ ಕೊಡುತ್ತದೆ. ಆದರೆ, ಕಾಫಿ, ಟೀ, ಬಜ್ಜಿ, ಬೋಂಡಾಗೆ ಸಬ್ಸಿಡಿ ಸಿಗುವುದಿಲ್ಲ. ಬಿಬಿಎಂಪಿಯೇ ಇದನ್ನು ಭರಿಸಲಿದೆ ಎಂದು ತಿಳಿಸಿದರು.