ನವದೆಹಲಿ, ನ 16 (MSP): ಬಾಲಿವುಡ್ ತಾರಾಜೋಡಿ, ಕ್ಯೂಟ್ ಜೋಡಿ ಎಂದೇ ಖ್ಯಾತಿ ಪಡೆದ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಈಗ ಮಿಸ್ಟರ್ ಆಂಡ್ ಮಿಸೆಸ್ ಆಗಿದ್ದಾರೆ. ಈ ಬಾಲಿವುಡ್ ಜೋಡಿ ನವೆಂಬರ್ 14 ಮತ್ತು 15ರಂದು ಕೊಂಕಣಿ ಹಾಗೂ ಸಿಂಧಿ ಶೈಲಿಯಲ್ಲಿ ಇಟೆಲಿಯ ಲೇಕ್ ಕೋಮೋದ ವಿಲ್ಲಾ ಡೆಲ್ ಬಲ್ಬಿಯನೆಲ್ಲೋದಲ್ಲಿ ಎರಡೆರಡು ಬಾರಿ ಹಸೆಮಣೆ ಏರಿದರು.
ವಿಶೇಷ ಎಂದರೆ ಇವರಿಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಏಕಕಾಲಕ್ಕೆ ತಮ್ಮ ವಿವಾಹದ ಮೊದಲ ಫೋಟೋಗಳನ್ನು ಹಂಚಿಕೊಂಡರು. ಕೊಂಕಣಿ ಶೈಲಿಯ ಮದುವೆ ಸಮಾರಂಭದ ವೇಳೆ ರಣವೀರ್ ಕ್ರೀಮ್- ವೈಟ್ ಕುರ್ತಾ ಧರಿಸಿದ್ದರೆ, ದೀಪಿಕಾ ಕೆಂಬಣ್ಣದ ಕಾಂಜೀವರಂ ಸೀರೆಯಲ್ಲಿ ಮಿಂಚಿದ್ದಾರೆ. ಇನ್ನು 15ರಂದು ಸಿಂಧಿ ಸಂಪ್ರದಾಯದಂತೆ ನಡೆದ ಮದುವೆ ಸಮಾರಂಭದಲ್ಲಿ ದೀಪಿಕಾ ಕೆಂಪು ಬಣ್ಣದ ಲೆಹಂಗಾ ಹಾಗೂ ದುಪಟ್ಟಾ ತೊಟ್ಟಿದ್ದರು.
ಆದರೆ ಇದೀಗ ದೀಪಿಕಾ ತೊಟ್ಟಿರುವ ಲೆಹಂಗಾದ ದುಪಟ್ಟಾ ಪ್ಯಾಷನ್ ಪ್ರೀಯರ ಮತ್ತು ನೆಟ್ಟಿಗರ ಚರ್ಚೆಯ ವಿಷಯವಾಗಿದೆ. ಕಾರಣ ಅವರು ಧರಿಸಿದ್ದ ದುಪಟ್ಟಾ ಮೇಲೆ ಸಂಸ್ಕೃತದಿಂದ ಶ್ಲೋಕವೊಂದನ್ನ ಬರೆಯಲಾಗಿದೆ. ‘ಸದಾ ಸೌಭಾಗ್ಯವತಿ ಭವ’ ಎಂದು ಎಂಬ ಶ್ಲೋಕವನ್ನು ಕಂಡು ಹಿಡಿದಿರುವ ಅವರ ಅಭಿಮಾನಿಗಳು, ಈ ಫೋಟೋವನ್ನ ಸಿಕ್ಕಾಪಟ್ಟೆ ವೈರಲ್ ಮಾಡಿದ್ದಾರೆ.