ಪಟ್ನಾ, ನ 16 (MSP): ಪತ್ನಿ ಮಟನ್ ಸಾರು ಮಾಡಲು ತಡಮಾಡಿದಲೆಂದು ಕೋಪಗೊಂಡ ಪಾಪಿ ಪತಿಯೊಬ್ಬ, ತನ್ನ ನಾಲ್ಕು ವರ್ಷದ ಮಗಳನ್ನು ನೆಲಕ್ಕೆ ಬಡಿದು ಕೊಂದಿರುವ ಹೃದಯ ವಿದ್ರಾವಕ ಘಟನೆ, ಬುಧವಾರ ಸಂಜೆ ಬಿಹಾರದಲ್ಲಿ ನಡೆದಿದೆ. 4 ವರ್ಷದ ಮಗಳಾದ ಶಾಲು ಕುಮಾರಿ ಕೊಂದ ಪಾಪಿಯನ್ನು ಫಕ್ರಿಟೋಲಿ ಗ್ರಾಮದ ಶಂಬು ಲಾಲ್ ಶರ್ಮಾ ಎಂದು ಗುರುತಿಸಲಾಗಿದೆ.
ಹೆಂಡತಿ ತನಗಾಗಿ ಮಟನ್ ಸಾರು ಬೇಗ ತಯಾರಿ ಮಾಡಲಿಲ್ಲ ಎಂಬ ಕಾರಣಕ್ಕೆ ಶಂಬು ಲಾಲ್ ಶರ್ಮಾ ತನ್ನ ಪತ್ನಿ ರಾಜಕುಮಾರಿ ದೇವಿ ಜೊತೆ ಬೈಯ್ಯತೊಡಗಿದ್ದಾನೆ ಕೊನೆಗೆ ಇದೇ ಜಗಳ ವಿಚಾರ ತಾರಕ್ಕೆ ಏರಿದೆ. ಈ ಸಂದರ್ಭ ಕೋಪಗೊಂಡ ಶಂಬು ಲಾಲ್ ಶರ್ಮಾ ಅಲ್ಲೇ ಸನಿಹದಲ್ಲಿ ಆಟವಾಡುತ್ತಿದ್ದ 4 ವರ್ಷದ ಮಗಳ ಕುತ್ತಿಗೆ ಹಿಡಿದೆಳೆದು ನಾಲ್ಕೈದು ಬಾರಿ ನೆಲಕ್ಕೆ ಕುಕ್ಕಿದ್ದಾನೆ. ತಕ್ಷಣ ಆಕೆ ಪ್ರಜ್ಞಾಹೀನಳಾಗಿ ಬಾಲೆ ಬಿದ್ದಿದ್ದಾಳೆ. ತಕ್ಷಣ ಗಾಯಗೊಂಡ ಮಗಳನ್ನು ಆತನೇ ಆಸ್ಪತ್ರೆಗೆ ಕರೆದೊಯ್ದಿದ್ದಾನೆ ಅಷ್ಚರಲ್ಲಾಗಲೇ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ
ಈ ಘಟನೆ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.ಅಮೌರ್ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ