ಕಾಸರಗೋಡು, ಅ.27 (DaijiworldNews/PY): ಸ್ಕೂಟರ್ನಲ್ಲಿ ಸಾಗಿಸುತ್ತಿದ್ದ ಗಾಂಜಾ ಹಾಗೂ ಮಾದಕವಸ್ತು ಸಹಿತ ಆರೋಪಿಯನ್ನು ಕಾಸರಗೋಡು ಅಬಕಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದಾರೆ.
ಉಪ್ಪಳ ಮುಳಿಂಜದ ಅಬ್ದುಲ್ ಲತೀಫ್ (37) ಬಂಧಿತ ಆರೋಪಿ.
ಈತನಿಂದ ಎರಡು ಕಿಲೋ ಗಾಂಜಾ ಮತ್ತು 400 ಗ್ರಾಂ ಎಂ.ಡಿ.ಎಂ.ಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
ಅಬಕಾರಿ ದಳದ ಸಿಬ್ಬಂದಿಗಳಿಗೆ ಲಭಿಸಿದ ಖಚಿತ ಮಾಹಿತಿಯಂತೆ ಪಚ್ಚಂಬಳದಲ್ಲಿ ಲತೀಫ್ ಚಲಾಯಿಸುತ್ತಿದ್ದ ಸ್ಕೂಟರನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಅಕ್ರಮ ಸಾಗಾಟ ಪತ್ತೆಯಾಗಿದೆ.
ಉಪ್ಪಳ, ಬಂದ್ಯೋಡು, ಪಚ್ಚಂಬಳ ಸೇರಿದಂತೆ ಹಲವೆಡೆಗೆ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಪ್ರಮುಖ ವ್ಯಕ್ತಿ ಎಂದು ಅಬಕಾರಿ ದಳದ ಸಿಬ್ಬಂದಿಗಳು ತಿಳಿಸಿದ್ದಾರೆ.