ಮಂಗಳೂರು, ಅ 27(DaijiworldNews/MS): ನಗರದ 33/11ಕೆವಿ ಅತ್ತಾವರ ಉಪಕೇಂದ್ರದಿಂದ ಹೊರಡುವ 11ಕೆವಿ ಮುನೀಶ್ವರ ಫೀಡರ್ ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.
ಅ.27ರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯ ವರೆಗೆ ಪೊಲೀಸ್ ಲೇನ್, ಪಿಡಬ್ಲ್ಯೂಡಿ, ಕಮರ್ಷಿಯಲ್ ಆಫೀಸ್, ಧೂಮಪ್ಪ ಕಂಪೌಂಡ್, ಓಲ್ಡ್ ಕೆಂಟ್ ರಸ್ತೆ, ಕೇರಳ ಸಮಾಜ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ಕೂಳೂರು/ ಮುಲ್ಲಕಾಡು: ನಗರದ 220/110/11ಕೆವಿ ಎಸ್.ಆರ್.ಎಸ್. ಕಾವೂರು ಉಪಕೇಂದ್ರದಿಂದ ಹೊರಡುವ 11ಕೆವಿ ಕೂಳೂರು, ಮುಲ್ಲಕಾಡು, ಮರಕಡ, ಕುಂಜತ್ತಬೈಲ್ ಮತ್ತು ಚಿಲಿಂಬಿ ಫೀಡರ್ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.
ಆದ ಕಾರಣ ಅ.27ರ ಬೆಳಿಗ್ಗೆ 9.30 ರಿಂದ ಸಂಜೆ 4.30ರ ವರೆಗೆ ಗಾಂಧಿ ನಗರ, ಶಾಂತಿನಗರ, ವಿದ್ಯಾನಗರ ಕೂಳೂರು ಜಂಕ್ಷನ್, ರಾಯಿಕಟ್ಟೆ, ಬಂಗ್ರಕೂಳೂರು, ಎ.ಜೆ. ಹಾಸ್ಪಿಟಲ್, ಮುಲ್ಲಕಾಡು, ಮರಕಡ, ಜ್ಯೋತಿನಗರ, ಕೊರಂಟಾಡಿ, ಬಸವನಗರ, ಮಿಲ್ಲತ್ನಗರ, ಕುಂಜತ್ತಬೈಲ್, ಕೊಟ್ಟಾರ ಚೌಕಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.